ಸುಣ್ಣಮೂಲೆ :ಅಹಮದ್ ಬದವಿ ಜುಮ್ಮಾ ಮಸೀದಿ ಇದರ ಗಲ್ಫ್ ಕಮೀಟಿ ಯ ವಾರ್ಷಿಕ ಮಹಾಸಭೆಯು ಕಮೀಟಿ ಗೌರವ ಅಧ್ಯಕ್ಷರಾದ ಇಬ್ರಾಹಿಂ ಶಾಲಿಮಾರ್ ಅವರ ನೇತೃತ್ವದಲ್ಲಿ ನಡೆಯಿತು.
ರಫೀಕ್ ಮಿಸ್ಬಾಹಿ ದುವಾ ನಿರ್ವಹಿಸಿದರು. ಸಭೆಯನ್ನು ಅಹಮದ್ ಬದವಿ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ನಾಸಿರ್ ಸಹದಿ ರರವರು ಉದ್ಘಾಟಿಸಿದರು.
ಗತ ವರ್ಷದ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಆಸೀಫ್ ಪಿ ಎ ಮಂಡಿಸಿದರು.
ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಟಿ ಎಂ ಪ್ರಾಸ್ತಾವಿಕ ಭಾಷಣ ಗೈದು ನಂತರ 2025 -26 ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಗೌರವಾದ್ಯಕ್ಷರಾಗಿ ಅಬ್ದುಲ್ ರಹಿಮಾನ್ ಟಿ ಎಮ್ , ಅಧ್ಯಕ್ಷರಾಗಿ ಅಝೀಝ್ ಮೂಲೆ ,ಉಪಾಧ್ಯಕ್ಷ ರಾಗಿ ಲತೀಫ್ ಪಿ ಎ ,ಪ್ರದಾನ ಕಾರ್ಯದರ್ಶಿಯಾಗಿ ಆಸೀಫ್ ಪಿ ಏ ಜೊತೆ ಕಾರ್ಯದರ್ಶಿಗಳಾಗಿ ರಶೀಕ್ ಮೂಲೆ ಹಾಗೂ ಕೋಶಾಧಿಕಾರಿಯಾಗಿ ಬಾತಿಷಾ ಪೆರೋಳಿ ರವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಇಬ್ರಾಹಿಂ ಶಾಲಿಮಾರ್ ಮುಹಮ್ಮದ್ ರಫೀಕ್ ಜಿ , ಸುಲೈಮಾನ್ ಯಸ್ , ಫಾರೂಕ್ ಟಿ ಎ ಇಕ್ಬಾಲ್ ಟಿ ಎಮ್ ,ಸಿದ್ದೀಕ್ ಟಿ ಎ ,ನಾಸಿರ್ ಕೆ ಬಿ ರವರು ಅಯ್ಕೆ ಯಾದರು.
ಸಿದ್ದೀಕ್ ಟಿ ಎ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.