ಸಮಾಜದ ಜೊತೆ ಶೈಕ್ಷಣಿಕ ಸಂಬಂಧಗಳು ಗಟ್ಟಿಯಾಗಿರುವ ಕಾರಣ ಸರಕಾರಿ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳುವoತಾಗಿದೆ : ಕಟೀಲ್
ಜಾತಿ, ಮತ, ಧರ್ಮ ಮರೆತು ಸಮಾಜದ ಜೊತೆ ಸಂಬಂಧಗಳು ಗಟ್ಟಿಯಾಗಿರುವ ಕಾರಣ ಸರಕಾರಿ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳುವoತಾಗಿದೆ. ಇಲ್ಲಿ ಶತಮಾನೋತ್ಸವ ಕಾರ್ಯಕ್ರಮ ಗ್ರಾಮೋತ್ಸವದ ರೀತಿ ನಡೆದಿದೆ. ಮೌಲ್ಯಾಧಾರಿತ, ಉತ್ತಮ ಸಂಸ್ಕಾರ ಮತ್ತು ಆತ್ಮವಿಶ್ವಾಸದ ಶಿಕ್ಷಣ ಸರಕಾರಿ ಶಾಲೆಯಲ್ಲಿ ಮಾತ್ರ ದೊರೆಯಲು ಸಾಧ್ಯ ಎಂದು ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ದೇವಚಳ್ಳ ಶಾಲೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಎಲಿಮಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತ ಸಂಭ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವು ಇಂದು ಸಂಜೆ ಕೇಪಲಕಜೆ ಸುಬ್ಬಪ್ಪ ಮಾಸ್ತರ್ – ತಂಗಮ್ಮ ರಂಗಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ. ವಿ. ತೀರ್ಥರಾಮ ಸಭಾಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಟಿ. ಎ. ಪಿ ಸಿ ಎಂ ಎಸ್ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಪ್ರಾ ಕೃ ಪ ಸ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ,
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯೆ ಶ್ರೀಮತಿ ಪ್ರೇಮಲತಾ ಕೇರ, ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ತಳೂರು, ದೇವಚಳ್ಳ ಗ್ರಾ. ಪಂ. ಪಿಡಿಓ ಗುರುಪ್ರಸಾದ್ ಬಿ., ಎಲಿಮಲೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ, ಶಾಲಾ ಮುಖ್ಯ ಶಿಕ್ಷಕ ಶ್ರೀಧರ್ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ. ವಿ., ಶತಮಾನೋತ್ಸವ ಸಮಿತಿಯ ಖಜಾಂಚಿ ರಾಧಾಕೃಷ್ಣ ಮಾವಿನಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್. ಡಿ. ಎಂ. ಸಿ. ಅಧ್ಯಕ್ಷ ಜಯಾನಂದ ಪಟ್ಟೆ ಸ್ವಾಗತಿಸಿದರು.
ಗೋಪಿನಾಥ್ ಮೆತ್ತಡ್ಕ, ಮುರಳಿಧರ ಪುನುಕುಟ್ಟಿ, ಬೆಳ್ಯಪ್ಪ ಕೋಡ್ತುಗುಳಿ ಕಾರ್ಯಕ್ರಮ ನಿರೂಪಿಸಿದರು.