ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ದೇವಚಳ್ಳ ಶಾಲೆಯ ಸಾಕ್ಷ್ಯ ಚಿತ್ರ ನಿರ್ಮಾಣ, ಕಾರ್ಯಕ್ರಮದ ನೇರ ಪ್ರಸಾರ, ಶಾಲೆಯ ಕುರಿತು ಹಲವು ಸ್ಟೋರಿ ಹಾಗೂ ಪತ್ರಿಕೆ , ವೆಬ್ ಸೈಟ್ ಮತ್ತು ಚಾನೆಲ್ ಮೂಲಕ ಶತ ಸಂಭ್ರಮವನ್ನು ಲಕ್ಷಾಂತರ ಮಂದಿಗೆ ಮುಟ್ಟಿಸಲು ಕಾರಣವಾದ ಸುದ್ದಿ ಬಳಗವನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಸುದ್ದಿ ಚಾನೆಲ್ ಮುಖ್ಯಸ್ಥ ಹಾಗೂ ಸಾಕ್ಷ್ಯ ಚಿತ್ರದ ನಿರ್ದೇಶಕ ದುರ್ಗಾಕುಮಾರ್ ನಾಯರ್ ಕೆರೆ, ವರದಿಗಾರ ದಯಾನಂದ ಕೊರತ್ತೋಡಿ, ಜಾಹೀರಾತು ವಿಭಾಗ ಮುಖ್ಯಸ್ಥ ರಮೇಶ್ ನೀರಬಿದಿರೆ ಗೌರವ ಸ್ವೀಕರಿಸಿದರು.