ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಜ. 27 ರಂದು ನಡೆಯಲಿದ್ದು ಮತದಾರರ ಅಂತಿಮ ಪಟ್ಟಿಯಲ್ಲಿ ತನ್ನ ಹೆಸರು ಕೈ ಬಿಡಲಾಗಿದೆ ತನಗೆ ಮತದಾನದ ಹಕ್ಕು ನೀಡಬೇಕೆಂದು ಮಂಡೆಕೋಲು ಗ್ರಾಮದ ಪೆರಜ ಪುರುಷೋತ್ತಮ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ಅವರಿಗೆ ಮತದಾನದ ಹಕ್ಕು ದೊರೆತಿರುವುದಾಗಿ ತಿಳಿದು ಬಂದಿದೆ.
ಪೆರಜದ ಪುರುಷೋತ್ತಮರವರು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮಂಡೆಕೋಲು ಸೊಸೈಟಿ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡಬೇಕೆಂದು ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು ಅವರ ಅರ್ಜಿಯನ್ನು
ಜ. 24ರಂದು ವಿಚಾರಣೆ ನಡೆಸಿ ಅವರಿಗೆ ಮತದಾನದ ಹಕ್ಕನ್ನು ನೀಡಬೇಕೆಂದು ಚುನಾವಣಾಧಿಕಾರಿಯವರಿಗೆ ನೋಟೀಸ್ ನೀಡಿರುವುದಾಗಿ ತಿಳಿದು ಬಂದಿದೆ. ಈ ವಿಚಾರ ವಾಗಿ ಬೆಂಗಳೂರಿನಲ್ಲಿ ವಕೀಲರಾಗಿರುವ ಪೆರುವಾಜೆಯ ಜಯಪ್ರಕಾಶ್ ರೈ ಯವರು ನ್ಯಾಯಾಲಯದಲ್ಲಿ ವಾದಿಸಿದ್ದರು.