ಬೆಳ್ಳಾರೆಯಲ್ಲಿ ಕುಲಾಲ ಸುಧಾರಕ ಸೇವಾ ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ವತಿಯಿಂದ 28 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜ.26 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಬೆಳಿಗ್ಗೆ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು.
ಬಳಿಕ ನಡುಬೊಟ್ಟು ಶ್ರೀ ಉದ್ಭವ ರೌದ್ರಾನಾಥೇಶ್ವರ ಕ್ಷೇತ್ರದ ಧರ್ಮದರ್ಶಿಗಳಾದ ರವಿ.ಎನ್.ಧಾರ್ಮಿಕ ಆಶೀರ್ವಚನ ನೀಡಿದರು.
ಬಳಿಕ ಕುಲಾಲ ಭಜನಾ ತಂಡ ಸುಳ್ಯ ಬೆಳ್ಳಾರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ನಾಗೇಶ್ ಕುಲಾಲ್ ತಡಗಜೆ,ಕಾರ್ಯದರ್ಶಿ ಧನಂಜಯ ಕುಲಾಲ್,ಖಜಾಂಜಿ ದಿನೇಶ್ ನೆಟ್ಟಾರ್,ಉಪಾಧ್ಯಕ್ಷ ಶ್ರೀಮತಿ ಸುಮಿತ್ರಾ ರವಿಚಂದ್ರ ಮಣಿಜಲು ಹಾಗೂ ಆಡಳಿತ ಸಮಿತಿ ಸದಸ್ಯರು ಭಕ್ತಾದುಗಳು ಉಪಸ್ಥಿತರಿದ್ದರು.