ಮಾ. 8: ಕಲ್ಲುಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕೊಡಿಯಾಲ ಇದರ ಸುವರ್ಣಮಹೋತ್ಸವ -ನಗರ ಭಜನೆಗೆ ಚಾಲನೆ

0

ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕೊಡಿಯಾಲ ಇದರ ಸುವರ್ಣ ಮಹೋತ್ಸವ ಮಾ. 8ರಂದು ನಡೆಯಲಿದ್ದು, ಇದರ ಅಂಗವಾಗಿ ವಾರ್ಷಿಕ ನಗರ ಭಜನಾ ಕಾರ್ಯಕ್ರಮಕ್ಕೆ ಜ. 25ರಂದು ಚಾಲನೆ ನೀಡಲಾಯಿತು.

ಬಿಳಿನೆಲೆ
ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತಾಧಿಕಾರಿ ಶ್ರೀಮತಿ ಚಂದ್ರಾವತಿ ರೈ, ಬೆಳ್ಳಾರೆ ಪ್ರಾ.ಕೃ.ಪ.ಸ‌.ಸಂಘದ ಮಾಜಿ ನಿರ್ದೇಶಕಿ
ಶ್ರೀಮತಿ ಶಾರದಾ ರೈ ಕೊರಂಗಾಜೆ, ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಶ್ರೀಮತಿ ಜಯಶೀಲ ಪಂಜಿಗಾರು, ಬೆಳ್ಳಾರೆ ಮೆಸ್ಕಾಂ ಸಿಬ್ಬಂದಿ ಶ್ರೀಮತಿ ಅನಿತಾ ಕಳಂಜ, ಯುವ ಪ್ರತಿಭೆ ಕು. ಹೇಮಸ್ವಾತಿ ಕುರಿಯಾಜೆ, ಕೊಡಿಯಾಲ ಗ್ರಾ.ಪಂ. ಮಾಜಿ ಸದಸ್ಯೆ ಶ್ರೀಮತಿ ಸುಮತಿ ಪೊಟ್ರೆ, ಕೊಡಿಯಾಲ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಚಿತ್ರಾ ದಿನೇಶ್ ಬಾಚೋಡಿ ದೀಪ ಬೆಳಗಿಸಿದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಸಂತಿ ಪೈ ನಗರ ಭಜನೆಗೆ ಚಾಲನೆ ನೀಡಿದರು. ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕೊಡಿಯಾಲ ಇದರ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಕೊಡಿಯಾಲ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಭಜನಾ ಮಂಡಳಿ ಗೌರವಾಧ್ಯಕ್ಷ ವಿಠಲ ಸಾಮಾನಿ, ಕಾರ್ಯಾಧ್ಯಕ್ಷ ಸೀತಾರಾಮ ಗೌಡ ಕಲ್ಪಣೆ, ಕಾರ್ಯದರ್ಶಿ ದಾಮೋದರ ಪೊಟ್ರೆ, ಕೋಶಾಧಿಕಾರಿ ಭಾಸ್ಕರ ಹಡೀಲು ಸೇರಿದಂತೆ ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾ. 8ರಂದು ಅಯೋರಾತ್ರಿ ಅಖಂಡ ಭಜನಾ ಕಾರ್ಯಕ್ರಮ, ಭಜನಾ ಶೋಭಾಯಾತ್ರೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.