ಹರಿಹರ ಪಳ್ಳತಡ್ಕದ ಶ್ರೀ ಅಯ್ಯಪ್ಪ ದೇವಸ್ಥಾನ ಗುಂಡಿಹಿತ್ಲು, ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಜ.25 ರಂದು ನಡೆಯಿತು.
ಬೆಳಗ್ಗೆ 6 ರಿಂದ ಸಂಜೆ 6 ತನಕ ಅರ್ಧ ಏಕಾಹ ಭಜನೆ ನಡೆಯಿತು. ವಿವಿಧ ಭಜನಾ ತಂಡಗಳು ಬೆಳಗ್ಗೆಯಿಂದ ಸಂಜೆ ತನಕ ಭಜನೆಗಳು ನಡೆಸಿದವು. ಬೆಳಗ್ಗೆ ಗಣಪತಿ ಹವನ ನಡೆಯಿತು. ಬಳಿಕ ನಾಗ ತಂಬಿಲ ನಡೆಯಿತು ಬಳಿಕ ದೇವರ ಹಾಗೂ ದೈವಗಳ ಪ್ರತಿಷ್ಠಾ ವಾರ್ಷಿಕ ಪೂಜೆ ನಡೆದು ಮಧ್ಯಾಹ್ನ ಮಹಾ ಪೂಜೆ ನಡೆದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಪರಿವಾರ ದೈವಗಳ ತಂಬಿಲ ನಡೆಯಿತು.
ಆಡಳಿತ ಮಂಡಳಿ ಅಧ್ಯಕ್ಷ ಜನಾರ್ದನ ಗುಂಡಿಹಿತ್ಲು, ಉಪಾಧ್ಯಕ್ಷ ಶರತ್ ಭಾಗವತ್, ಖಜಾಂಜಿ ಮಣಿಕಂಠ ಕಟ್ಟ, ಕಾರ್ಯದರ್ಶಿ ಬಿಂದು ಪಿ, ಜತೆ ಕಾರ್ಯದರ್ಶಿ ಸತೀಶ್ ಟಿ.ಎನ್ , ಸದಸ್ಯರಾದ ನಾರಾಯಣ ಕೇಮಾಟಿ, ನಾರಾಯಣಯ್ಯ ಮುಳ್ಳುಬಾಗಿಲಿ, ಮಣಿಕಂಠ ಕೊಳಗೆ, ಶಶಿಕಲಾ ಹರಿಹರ, ರೋಹಿದಾಸ್ ಹರಿಹರ, ನಿತ್ಯಾನಂದ ಭೀಮಗುಳಿ, ಸುರ್ಜಿತ್ ಶರ್ಮಾ ಗುಂಡಿಹಿತ್ಲು, ಹರೀಶ್ ಎಚ್, ಹುಕ್ರಪ್ಪ ನಾಯ್ಕ, ನಾರಾಯಣ ಹರಿಹರ, ರಾಜೀವ ಪೆರ್ಮುಕಜೆ, ನಿಶಾಂತ್ ಕಟ್ಟ, ವಿಶ್ವನಾಥ ಮುಂಡೋಡಿ, ಮನೀಷ್ ಪಳ್ಳತಡ್ಕ ಮತ್ತಿತರರು ಅಲ್ಲದೇ ಸ್ಥಳೀಯರು ಸೇರಿ ಕಾರ್ಯಕ್ರಮ ಯಶಸ್ವಿಗೆ ಕೈ ಜೋಡಿಸಿದರು.