ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಸಂದರ್ಭದಲ್ಲಿ
ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದ ಸಂಸ್ಕಾರ ದೀಪಿಕೆ ಬಳಗದ ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ ಮತ್ತು ಭಜನೆ ಕಾರ್ಯಕ್ರಮವು ನಡೆಯಿತು.
ಅಚ್ಯುತ ಅಟ್ಲೂರು ಸ್ವಾಗತಿಸಿದರು.
ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಶುಭಹಾರೈಸಿದರು.
ಡಾ.ಶ್ರೀ ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೆಂಕಟೇಶ ಶಾಸ್ತ್ರಿ, ವಿದ್ಯಾ ಶ್ರೀ ಕೃಷ್ಣ, ನಳಿನಾಕ್ಷಿ ಕಲ್ಮಡ್ಕ,ಪ್ರಸನ್ನ ಐವರ್ನಾಡು ಮಾರ್ಗದರ್ಶನ ನೀಡಿದರು.
ದೇವಿಪ್ರಸಾದ್ ವಂದಿಸಿದರು.