ಮುರುಳ್ಯ ಶಾಲೆಯಲ್ಲಿ ಗಣರಾಜ್ಯೋತ್ಸವ, ನೂತನ ಕಟ್ಟಡ ಉದ್ಘಾಟನೆ, ಸನ್ಮಾನ ಸಮಾರಂಭ ಪ್ರತಿಭಾ ದಿನೋತ್ಸವ

0

ಮುರುಳ್ಯ ಅಲೆಕ್ಕಾಡಿ ಸ.ಉ.ಹಿ.ಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಿತು.
ಶಾಲಾ ಮಕ್ಕಳ ಸಾಮೂಹಿಕ ಡಂಬಲ್ಸ್, ಹೂಪ್ಸ್, ಲೇಝಿಂ ಕವಾಯತಿನ ಬಳಿಕ ಶಾಲಾ ಎಸ್. ಡಿ .ಎಂ. ಸಿ ಅಧ್ಯಕ್ಷ ಅವಿನಾಶ್ ದೇವರ ಮಜಲು ಧ್ವಜಾರೋಹಣಗೈದರು. ಶಾಲೆಗೆ ಅತಿ ಅಗತ್ಯವಾದ ಒಂದು ತರಗತಿ ಕೊಠಡಿಯನ್ನು ೨.೬೦ ಲಕ್ಷದಲ್ಲಿ ವೆಚ್ಚದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಬೆಂಗಳೂರು ಉದ್ಯಮಿಯಾಗಿರುವ ಸಂತೋಷ್ ಕುಮಾರ್ ಅಲೆಕ್ಕಾಡಿ ಇವರು ನಿರ್ಮಿಸಿಕೊಟ್ಟಿದ್ದು, ಕೊಠಡಿಯನ್ನ ಕೇರ್ಪಡ ಶ್ರೀ ಮಹೀಶಮರ್ದಿನಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಕೊಠಡಿ ಬೋರ್ಡ್ ಅನಾವರಣ ಮಾಡಿ ಕರಿಹಲಗೆಯಲ್ಲಿ ಬರೆದು ಇಲಾಖೆಗೆ ಬಿಟ್ಟುಕೊಟ್ಟರು.

ಕೊಠಡಿ ನೀಡಿದ ಸಂತೋಷ್ ಕುಮಾರ್ ಅವರನ್ನು ಪೇಟ ತೊಡಿಸಿ, ಹಾರ ಹಾಕಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಭಾವತಿ ಸನ್ಮಾನ ಪತ್ರ ವಾಚಿಸಿದರು, ಸಭಾಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅವಿನಾಶ್ ದೇವರಮಜಲು ವಹಿಸಿ, ಶಾಲಾ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡವರನ್ನು ಶ್ಲಾಘನೆ ಮಾಡಿ ಅಭಿನಂದಿಸಿದರು.

ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಿತಾ ಸುವರ್ಣ ದೀಪ ಪ್ರಜ್ವಲನೆ ಮಾಡಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಸುಳ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ಇವರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ತಾಲೂಕು ಅನುದಾನದಿಂದ ನಿರ್ಮಿಸಲಾದ ಹೊಸ ತರಗತಿ ಕೊಠಡಿಯನ್ನು ಉದ್ಘಾಟಿಸಿ, ಶಾಲಾ ಮಕ್ಕಳು ಶಾಲೆಯಲ್ಲಿ ಹೇಗಿರಬೇಕು ಉನ್ನತ ಶಿಕ್ಷಣ, ಉನ್ನತ ಹುದ್ದೆ ಪಡೆಯಬೇಕಾದರೆ ಇಲ್ಲಿ ಶಿಕ್ಷಣ ಅಡಿಪಾಯ ಶಿಕ್ಷಣದ ಒಟ್ಟಿಗೆ ಶಾಲೆ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳುತ್ತಾ ಮಕ್ಕಳಿಗೆ ಕಿರು ಪಾಠ ಮಾಡಿದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಎಣ್ಮೂರು ಸಿಆರ್‌ಪಿ. ಜಯಂತ.ಕೆ , ಶಾಲಾ ದತ್ತು ಸ್ವೀಕೃತತರು ಮತ್ತು ಕ್ಷೀರಾ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ಯತೀಶ್ ಪಾಲೋಳಿ ಕೇರ್ಪಡ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಅಕ್ಷಯ ಆಳ್ವ ನೀರುಡೆಲು ಶಾಲಾ. ಎಸ್. ಡಿ. ಎಂ. ಸಿ . ಉಪಾಧ್ಯಕ್ಷ ಸವಿತಾ ಕರಿಂಬಿಲ , ಶಿಕ್ಷಣ ಸಂಯೋಜಕರಾದ ಸಂಧ್ಯಾಕುಮಾರಿ ಬಿ.ಎಸ್, ತಾಲೂಕು ನೌಕರರ ಸಂಘದ ನಿರ್ದೇಶಕರಾದ ಶ್ರೀಮತಿ ನಳಿನಾಕ್ಷಿ. ಬಿ ದಾನಿಗಳಾದ ಶ್ರೀ ನವೀನ್ ಕುಮಾರ್ ಬೊಳ್ಕಜೆ, ಕಾಣಿಯೂರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಪೂಜಾರಿ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಕುಮಾರ್ ಅಲೆಕ್ಕಾಡಿ, ಶಾಲಾ ಮುಖ್ಯ ಗುರು ಶ್ರೀಮತಿ ಶಶಿಕಲ ಪೂಜಾರಿ, ವಿದ್ಯಾರ್ಥಿ ನಾಯಕ ಪೂರ್ವಜ್ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಮಧು ಯತೀಶ್ ರವರು, ಶಿಕ್ಷಕ ವೃಂದದ ಎಲ್ಲಾ ಶಿಕ್ಷಕರಿಗೆ ವೈಯಕ್ತಿಕವಾಗಿ ಕೊಡುಗೆ ನೀಡಿ ಗೌರವಿಸಿದರು, ಶೈಕ್ಷಣಿಕ ಚಟುವಟಿಕೆ ಮತ್ತು ಶಾಲಾಭಿವೃದ್ಧಿಗಾಗಿ ಶ್ರಮಿಸಿದ ಶಿಕ್ಷಕವೃಂದ , ಎಸ್. ಡಿ. ಎಂ. ಸಿ ವೃಂದ ಹಾಗೂ ಅಡುಗೆಸಿಬ್ಬಂದಿಗಳನ್ನು ವೈಯಕ್ತಿಕವಾಗಿ ಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಶಶಿಕಲ ರವರು ಗುರುತಿಸಿ ಉಡುಗೊರೆ ನೀಡಿ ಗೌರವಿಸಲಾಯಿತು.

ಶಿಕ್ಷಕಿ ಶ್ರೀಮತಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು ಜಿ. ಪಿ. ಟಿ. ಶಿಕ್ಷಕಿ ನಳಿನಾಕ್ಷಿ. ಬಿ. ಸ್ವಾಗತಿಸಿದರು .ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಕರಂಬಿಲ ವಂದಿಸಿದರು. ಶಾಲಾ ಮಕ್ಕಳಿಂದ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ನಳಿನಾಕ್ಷಿ ಬಿ. ಮಿಥುನಾಕ್ಷಿ ಎಂ. ಮತ್ತು ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು, ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ವಂದಿಸಿದರು. ಸಾವಿರಾರು ವಿದ್ಯಾಭಿಮಾನಿಗಳು, ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. (ವರದಿ :ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ)