ಜಯನಗರ : ಕೊರಂಬಡ್ಕ ನೇಮೋತ್ಸವ ಸಮಿತಿ‌ ರಚನೆ

0

ಶ್ರೀ ನಾಗಬ್ರಹ್ಮ ಅದಿಮೋಗೆರ್ಕಳ ದೈವಸ್ಥಾನ ಕೊರಂಬಡ್ಕ, ಜಯನಗರ ಇಲ್ಲಿ 2024 – 2025 ನೆ ನೇಮೋತ್ಸವ ಸಮಿತಿ ರಚಿಸಲಾಯಿತು.

ಸಭೆಯ ಅಧ್ಯಕ್ಷ ತೆಯನ್ನು ದೈವಸ್ಥಾನದ ಆಡಳಿತ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಮಾಸ್ಟರ್ ಹೊಸಗದ್ದೆ ವಹಿಸಿಕೊಂಡಿದ್ದರು. ಏಪ್ರಿಲ್ 4 ಮತ್ತು 5 ರ 2025ನೇ ದಿನಾಂಕದಂದು ಕಾಲಾವದಿ ನೇಮ ಹಾಗೂ ಹರಕೆ ಕೋಲ ಸೇವೆ ನಡೆಯಲಿರುವುದು. ಆ ಪ್ರಯುಕ್ತ ನೂತನ ಉತ್ಸವ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸೋಮಶೇಖರ ದೋಳ, ಜಯನಗರ. ಉಪಾಧ್ಯಕ್ಷರಾಗಿ ರಮೇಶ್ ಇರಂತಮಜಲು, ಕಾರ್ಯದರ್ಶಿ ಪ್ರಸನ್ನ ಜಯನಗರ, ಜೊತೆ ಕಾರ್ಯದರ್ಶಿ ತಾರಾ ಆರ್ ರೈ, ಖಜಾಂಜಿ ಪ್ರಶಾಂತ ಜಯನಗರ ಆಯ್ಕೆ ಆದರು.


ಆರ್ಥಿಕ ಸಮಿತಿ ಸಂಚಾಲಕರಾಗಿ ಮಂಜು ಬಳ್ಳಾರಿ, ಅಲಂಕಾರ ಸಮಿತಿ ಸಂಚಾಲಕರಾಗಿ ರಮೇಶ್ ಕುದ್ಪಾಜೆ, ಮಹಿಳಾ ಸಮಿತಿ ಸಂಚಾಲಕರಾಗಿ ಮಮತಾ ಅವರನ್ನು ಆರಿಸಲಾಯಿತು. ಸಭೆಯಲ್ಲಿ ಸಂಚಾಲಕರಾದ ಜಗನ್ನಾಥ ಜಿ ಜಯನಗರ ಸೂಕ್ತ ಮಾಹಿತಿ ನೀಡಿದರು. ಕೇಶವ ಮಾಸ್ಟರ್ ಹೊಸಗದ್ದೆ ಸ್ವಾಗತಿಸಿದರು ಮತ್ತು ರಮೇಶ್ ಇರಂತಮಜಲು ವಂದಿಸಿದರು.