ಪುನಃ ಪ್ರತಿಷ್ಠಾ ಮಹೋತ್ಸವ ಅಣಿಯಾಗಿದೆ ಮುರೂರು – ದೇವರಗುಂಡ ಶ್ರೀಕೃಷ್ಣ ಭಜನಾ ಮಂದಿರ

0

ಅದ್ದೂರಿಯಾಗಿ ನಡೆದ ಹಸಿರುವಾಣಿ ಮೆರವಣಿಗೆ

ಮಂಡೆಕೋಲು ಗ್ರಾಮದ ಮುರೂರು – ದೇವರಗುಂಡ ದ್ವಾರಕಾನಗರದಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀಕೃಷ್ಣ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ಫೆ.೨ರಂದು ಹಸಿರುವಾಣಿ ಮೆರವಣಿಗೆ ನಡೆಯಿತು.


ಬೆಳಗ್ಗೆ ಭಜನಾ ಮಂದಿರದ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿಹಾಗೂ ಪ್ರತಿಷ್ಠಾ ಸಮಿತಿಯವರು, ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಊರವರಿದ್ದು ಹಸಿರುವಾಣಿ ಮೆರವಣಿಗೆಯು ದೇವರಗುಂಡ ತರವಾಡು ಮನೆಯಿಂದ ಹೊರಟಿತು. ಮಂದಿರಕ್ಕೆ ಹಸಿರುವಾಣಿ ತಲುಪಿದ ಬಳಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಸಂಜೆ ಋತ್ವಿಜರ ಆಗಮನ, ದೇವತಾ ಪ್ರಾರ್ಥನೆ, ಬಳಿಕ ವೈದಿಕ ಕಾರ್ಯಗಳು ನಡೆಯುವುದು. ರಾತ್ರಿ ಅನ್ನಸಂತರ್ಪಣೆ ನಡೆಯುವುದು.
ರಾತ್ರಿ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ಮತ್ತು ಗಾಯನ ನಡೆಯುವುದು. ಬಳಿಕ ಸಾಯಿ ಸಂಗೀತ ಮೆಲೋಡಿಸ್ ಕಾಸರಗೋಡು ಇವರಿಂದ ಸಂಗೀತ ರಸಮಂಜರಿ ನಡೆಯುವುದು.


ಫೆ.೩ರಂದು ಬೆಳಗ್ಗೆ ದ್ವಾದಶ ನಾರಿಕೇಳ ಮಹಾಗಣಪತಿ ಹೋಮ, ಬಳಿಕ ೧೦.೨ರ ಶುಭ ಮುಹೂರ್ತದಲ್ಲಿ ಶ್ರೀಕೃಷ್ಣ ದೇವರ ಛಾಯಾಚಿತ್ರ ಪ್ರತಿಷ್ಠೆ ನಡೆಯುವುದು. ಬಳಿಕ ಭಜನೆ ಆರಂಭಗೊಳ್ಳುವುದು. ಬಳಿಕ ಶ್ರೀಗೋಪಾಲಕೃಷ್ಣ ಹವನ ಆರಂಭವಾಗಿ ಶ್ರೀ ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಮಧ್ಯಾಹ್ನ ಹವನ ಪೂರ್ಣಾಹುತಿ, ಕಲಶ ಸಂಪ್ರೋಕ್ಷಣೆ ನಡೆಯುವುದು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯುವುದು.


ಧಾರ್ಮಿಕ ಸಭೆ


ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು ಪ್ರತಿಷ್ಠಾ ಸಮಿತಿ ಅಧ್ಯಕ್ಷ ಡಿ.ವಿ.ಸುರೇಶ್ ದೇವರಗುಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಕರುಳಾದ ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಬೊಟ್ಯಾಡಿ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದು, ಸಾಮಾಜಿಕ ಮುಖಂಡ ಪ್ರಕಾಶ್ ಮಲ್ಪೆಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ರಾತ್ರಿ ಅನ್ನಸಂತರ್ಪಣೆ ನಡೆಯುವುದು. ರಾತ್ರಿ ೯ ರಿಂದ ಮಂಜೇಶ್ವೇರ ಕಲಾವಿದರಿಂದ ನಾಟಕ ಶಾರದಾ ಆರ್ಟ್ಸ್ ಕಲಾವಿದರು ಅಭಿನಯದ ಕಥೆ ಎಡ್ಡೆಂಡು ಮೂಡಿಬರಲಿದೆ.