ಫೆ. 11ರಿಂದ ಫೆ. 15: ಕಾಂಚೋಡು ಜಾತ್ರೋತ್ಸವ

0


ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಅಣ್ಣಪ್ಪಾದಿ ದೈವಗಳ ನೇಮೋತ್ಸವ ಫೆ. 11ರಿಂದ ಫೆ. 15ರ ವರೆಗೆ ನಡೆಯಲಿದೆ.


ಫೆ. 4ರಂದು ದೇವತಾ ಪ್ರಾರ್ಥನೆ, ಗೊನೆ ಮುಹೂರ್ತ ನಡೆಯಿತು. ಫೆ. 11ರಂದು ತಂತ್ರಿಗಳ ಆಗಮನ, ಊರ ಭಕ್ತಾದಿಗಳಿಂದ ಮತ್ತು ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಿಂದ ಹೊರೆ ಕಾಣಿಕೆ ಸಮರ್ಪಣೆ, ವೈದಿಕ ಕಾರ್ಯಗಳು ನಡೆಯಲಿದೆ. ಫೆ. 12ರಂದು ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಗಳು, ಮಹಿಳೆಯರಿಂದ ಕುಂಕುಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ ಬಲಿ ಉತ್ಸವ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಫೆ. 13ರಂದು ಬೆಳಿಗ್ಗೆಯಿಂದ ವೈದಿಕ ಕಾರ್ಯಗಳು, ಪೂ. 10.00ರಿಂದ ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ ದರ್ಶನ ಬಲಿ ಉತ್ಸವ, ಗಂಧ ಪ್ರಸಾದ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ಸಂಜೆ ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿ ದೈವಗಳ ಭಂಡಾರ ತೆಗೆಯುವುದು, ಕಲ್ಲೇರಿತ್ತಾಯ ದೈವದ ಭಂಡಾರ ತೆಗೆದು ಕಲ್ಲೇರಿತ್ತಾಯ ಮಾಡದಲ್ಲಿ ತಂಬಿಲ ಸೇವೆ, ರಾತ್ರಿ ಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ಬಳಿಕ ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮೋತ್ಸವ, ಕಾಣಿಕೆ, ಪ್ರಸಾದ ವಿತರಣೆ ಜರಗಲಿದೆ.

ಫೆ. 14ರಂದು ಬೆಳಿಗ್ಗೆ 7.30ರಿಂದ ಕಲ್ಲೇರಿತ್ತಾಯ ಮಾಡದಲ್ಲಿ ನೇಮೋತ್ಸವ, ಪ್ರಸಾದ ವಿತರಣೆ, ದೇವಳದಿಂದ ಅನ್ನಸಂತರ್ಪಣೆ, ದೇವಸ್ಥಾನದಲ್ಲಿ ಬೆಳಿಗ್ಗೆ 10.00ರಿಂದ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ, ಅಣ್ಣಪ್ಪ ಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8.30ರಿಂದ ರಂಗಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ 10.00ರಿಂದ ಅಣ್ಣಪ್ಪ ಸ್ವಾಮಿ ಮಾಡದಲ್ಲಿ ಅಣ್ಣಪ್ಪ ಸ್ವಾಮಿ, ಪಂಜುರ್ಲಿ, ದೈವಗಳ ನೇಮ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಬೆಳಗಿನ ಜಾವ ದೇವಾಲಯದ ವಠಾರದಲ್ಲಿ ಶ್ರೀ ಗುಳಿಗ ದೈವದ ನೇಮ, ಪ್ರಸಾದ ವಿತರಣೆ, ಬಲಿ ನಡೆಯಲಿದೆ.


ಫೆ. 11ರಂದು ಸಂಜೆ 7.30ರಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಚೊಕ್ಕಾಡಿ ಇವರಿಂದ ಭಜನಾ ಕಾರ್ಯಕ್ರಮ, ಫೆ. 12ರಂದು ಬೆಳಿಗ್ಗೆ 10.00ರಿಂದ ಗೀತಜ್ಞಾನಯಜ್ಞ ತಂಡ ಬಾಳಿಲ ಇವರಿಂದ ಭಗವದ್ಗೀತಾ ಪಾರಾಯಣ, ಫೆ. 13ರಂದು ಬೆಳಿಗ್ಗೆ 11.30ರಿಂದ ಕಲ್ಮಡ್ಕದ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ 6.30ರಿಂದ‌ ಕಲಾ ಕೇಸರಿ ಕಲಾ ಸಂಘ ಜಾಲ್ಸೂರು ಇವರಿಂದ ಭಜನೆ ನಡೆಯಲಿದೆ. ಫೆ. 14ರಂದು ಸಂಜೆ 6.30ರಿಂದ ವಿದ್ಯಾಶ್ರೀ ಯಕ್ಷಗಾನ ಕಲಾ‌ಮಂಡಳಿ ಇಂದ್ರಾಜೆಯವರಿಂದ ಯಕ್ಷಗಾನ ಬಯಲಾಟ ಗಿರಿಜಾ ಕಲ್ಯಾಣ ನಡೆಯಲಿದೆ.