Home Uncategorized ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಸಕಲ ಪೂರ್ವ ಸಿದ್ಧತೆ

ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಸಕಲ ಪೂರ್ವ ಸಿದ್ಧತೆ

0

ಮಾ.15 ರಿಂದ 18 ರ ತನಕ ನಡೆಯಲಿರುವ ಕಾರ್ಯಕ್ರಮದ ಕುರಿತು ಪದಾಧಿಕಾರಿಗಳಿಂದ ಪತ್ರಿಕಾಗೋಷ್ಠಿ

ಆಲೆಟ್ಟಿ ಗ್ರಾಮದಲ್ಲಿರುವ
ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.15ರಿಂದ 18ರ ತನಕ ನಡೆಯಲಿರುವುದು.

ಈಗಾಗಲೇ ದೈವಂಕಟ್ಟು ಮಹೋತ್ಸವಕ್ಕೆ ಪೂರ್ವ ಸಿದ್ಧತೆಗಳು ಭರದಿಂದ ‌ಸಾಗುತ್ತಿದೆ ಎಂದು ಮಹೋತ್ಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ಫೆ.4 ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೋತ್ಸವ ಸಮಿತಿಯ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು
“ಕುತ್ತಿಕೋಲು ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಪರಿಧಿಯಲ್ಲಿ ಬರುವ ಸುಳ್ಯ ಪ್ರಾದೇಶಿಕ ಸಮಿತಿಯ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ 2005 ರಲ್ಲಿ ಪುನ‌ರ್ ಪ್ರತಿಷ್ಠಾ ಮಹೋತ್ಸವವು ನಡೆದಿತ್ತು.

ದೈವಸ್ಥಾನದಲ್ಲಿ ಕೆಲವೊಂದು ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದ್ದು ಮುಂದಿನ ತಿಂಗಳಿನಲ್ಲಿ ನಡೆಯಲಿರುವ ದೈವಂಕಟ್ಟು ಮಹೋತ್ಸವಕ್ಕೆ ಪೂರ್ವ ಸಿದ್ಧತಾ ಕಾರ್ಯಗಳು ಸ್ಥಳೀಯ ಭಕ್ತಾದಿಗಳ ಸಹಕಾರದೊಂದಿಗೆ ಮಾಡಿಕೊಂಡು ಬರಲಾಗುತ್ತಿದೆ.
ಈ ದೈವಸ್ಥಾನವು ಕುತ್ತಿಕೋಲು ತಂಬುರಾಟ್ಟಿ ಕ್ಷೇತ್ರದ ತೀಯ ಸಮುದಾಯಕ್ಕೆ ಸೇರಿದ ತಾಲೂಕಿನ ಏಕೈಕ ದೈವಸ್ಥಾನವಾಗಿರುವುದರಿಂದ ಊರಿನವರ ಸಹಕಾರದಿಂದ ಉತ್ಸವವನ್ನು ನಡೆಸಬೇಕಾದ ಅನಿವಾರ್ಯತೆ ಇರುವುದು.
ಸುಮಾರು 300 ವರ್ಷಗಳ ಬಳಿಕ ಇಲ್ಲಿ ದೈವಂಕಟ್ಟು ಉತ್ಸವವು ನಡೆಯಲಿದ್ದು ಉತ್ಸವದಲ್ಲಿ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಉತ್ಸವದ ಸಂದರ್ಭದಲ್ಲಿ
ಪಾರ್ಕಿಂಗ್, ಊಟದ ವ್ಯವಸ್ಥೆ ಹಾಗೂ ದೈವ ನರ್ತನ ಸೇವೆ ನಡೆಯುವ ಮರಕ್ಕಳ ನಿರ್ಮಾಣ ಕಾರ್ಯ ಹಾಗೂ ಭಕ್ತರು ಕುಳಿತುಕೊಂಡು ವೀಕ್ಷಿಸಲು ಬೇಕಾದ
ಸಕಲ ವ್ಯವಸ್ಥೆಯ ಕೆಲಸ ಕಾರ್ಯಗಳುನಿರಂತರವಾಗಿ ಶ್ರಮದಾನದ ಮೂಲಕ ಕಳೆದಎರಡುತಿಂಗಳಿನಿಂದ ನಡೆಯುತ್ತಿದೆ. ಸ್ವಂತ ಜಮೀನಿನಲ್ಲಿರುವ ಅಡಿಕೆ ಮರಗಳನ್ನು ಕಡಿದು ಮತ್ತು ಬೇಸಾಯದ ಗದ್ದೆಯನ್ನು‌ ಬಿಟ್ಟು ಕೊಟ್ಟು ಉತ್ಸವ ನಡೆಸಲು
ಬೇಕಾದ ವಿಶಾಲ ಸ್ಥಳವಾಕಾಶವನ್ನು ಸ್ವಯಂ ಪ್ರೇರಿತರಾಗಿ ಸ್ಥಳೀಯರು ನೀಡಿ ಉದಾರತೆಯನ್ನು ಮೆರೆದಿದ್ದಾರೆ
ಎಂದು ಅವರು ಹೇಳಿದರು.

ಫೆ.20ರಂದು ಪೂ.11.38 ರಿಂದ 1.24ರ ಮಧ್ಯೆ ಕೂವಂ ಅಳಕ್ಕಲ್(ಭತ್ತ ಅಳೆಯುವುದು) ನಡೆಯಲಿದೆ. ನಂತರ ವೀಳ್ಯ ಕೊಡುವುದು, ಪ್ರಸಾದ ವಿತರಣೆ, ಸಂಜೆ ದರ್ಶನ ಸೇವೆಯೊಂದಿಗೆ ಕೈವೀದ್‌ ನಡೆಯಲಿದೆ.

ಮಾ.15ರಂದು ಪೂ.10 ರಿಂದ ಹಸಿರುವಾಣಿ ಮೆರವಣಿಗೆ ಶ್ರೀ ಮೂಕಾಂಬಿಕ ಭಜನಾ ಮಂದಿರದ ವಠಾರದಿಂದ ಹೊರಡಲಿದೆ.ಪೂ.ಗಂಟೆ 11.15 ರಿಂದ 12.20ರ ಒಳಗೆ ಕಲವರ ನಿರಕ್ಕಲ್ (ಉಗ್ರಾಣ ತುಂಬುವುದು) ರಾತ್ರಿ 7.00 ರಿಂದ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು.
ರಾತ್ರಿ 10 ರಿಂದ ಶ್ರೀ ಕೊರ್ತಿಯಮ್ಮನ ಕೋಲಗಳು ರಾತ್ರಿ 1.30 ರಿಂದ ಶ್ರೀ ಪೊಟ್ಟನ್ ದೈವ
ಕೋಲ ನಡೆಯಲಿದೆ.

ಮಾ.16ರಂದು ಪೂ.9 ರಿಂದ ಶ್ರೀ ವಿಷ್ಣುಮೂರ್ತಿ ದೈವದ ನರ್ತನ ಸೇವೆಯಾಗಿ ಪೂ.10:30 ರಿಂದ ಶ್ರೀ ಚಾಮುಂಡಿಯಮ್ಮ ಮಧ್ಯಾಹ್ನ ಗಂಟೆ 12.30ರಿಂದ ಶ್ರೀ ಗುಳಿಗ ದೈವ, ಸಂಜೆ 6ರಿಂದ ಕೈವೀದ್ ನಂತರ ಶ್ರೀ ವಯನಾಟ್ ಕುಲವನ್ ಹಾಗೂ ಸಪರಿವಾರ ದೈವಗಳಿಗೆ ಕೂಡುವುದು. ಮಾ.17ರಂದು ಅಪರಾಹ್ನ 2 ರಿಂದ ಶ್ರೀ ಕಾರ್ನವನ್ ದೈವದ ವೆಳ್ಳಾಟಂ ಅಪರಾಹ್ನ 4 ರಿಂದ ಶ್ರೀಕೋರಚ್ಚನ್ ದೈವದ ವೆಳ್ಳಾಟಂ, ಸಂಜೆ 7 ರಿಂದ ಶ್ರೀಕಂಡನಾರ್‌ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್, ಅದೇ ದಿನ ರಾತ್ರಿ 11ರಿಂದ ಶ್ರೀ ವಿಷ್ಣುಮೂರ್ತಿ ದೈವಕ್ಕೆ ಕೂಡುವುದು. ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿರುವುದು.

ಮಾ.18 ಮಂಗಳವಾರ ಪೂರ್ವಾಹ್ನ 9ರಿಂದ ಶ್ರೀ ಕಾರ್ನವನ್ ದೈವ 11ರಿಂದ ಶ್ರೀಕೋರಚ್ಚನ್ ದೈವ, ಮಧ್ಯಾಹ್ನ 1.00 ರಿಂದ ಶ್ರೀ ಕಂಡನಾ‌ರ್ ಕೇಳನ್ ದೈವ, ಸಂಜೆ ಗಂಟೆ 4ರಿಂದ ಶ್ರೀ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆಯಾಗಲಿದೆ. ಸಂಜೆ 5 ರಿಂದ ಶ್ರೀ ವಿಷ್ಣುಮೂರ್ತಿ ದೈವ ಹಾಗೂ ರಾತ್ರಿ 1ರಿಂದ ಮರ ಪಿಳರ್ಕಲ್ ನಂತರ ಕೈವೀದ್‌ ನಡೆಯಲಿದೆ
ಎಂದು ಸುಧಾಕರ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ಕೃಷ್ಣ ಕಾಮತ್‌ ಅರಂಬೂರು, ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಆಡಳಿತ ಸಮಿತಿ ಕೋಶಾಧಿಕಾರಿ ರಧೀಶನ್ ಅರಂಬೂರು, ಕುಟುಂಬದ ಯಜಮಾನ ಕುಂಞಕಣ್ಣ.ಎ, ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಎನ್.ಎ.ರಾಮಚಂದ್ರ, ನಾರಾಯಣ ಕೇಕಡ್ಯ, ಕೆ.ಎಸ್.ಕೃಷ್ಣಪ್ಪ ಕೆದಂಬಾಡಿ, ರಾಧಾಕೃಷ್ಣ ಪರಿವಾರಕಾನ, ಪದ್ಮಯ್ಯ ಪಡ್ಡು, ಕುಂಞರಾಮನ್‌ ಶ್ರೀಶೈಲಂ, ಪ್ರಮುಖರಾದ ಕೊರಗಪ್ಪ ಮಾಸ್ತ‌ರ್ ಕಣಕ್ಕೂರು,ಜಯಪ್ರಕಾಶ್‌ ಕುಂಚಡ್ಯ, ಎ.ಸಿ.ವಸಂತ, ಅಶೋಕ ಪೀಚೆ, ಗಂಗಾಧರ ನೆಡ್ಡಿಲ್, ಜಯಪ್ರಕಾಶ್ ಅರಂಬೂರು,ರತ್ನಾಕರ ರೈ ಅರಂಬೂರು, ಉಮೇಶ್ ನಾಯ್ಕ್ ಅರಂಬೂರು, ಪ್ರಭಾಕರನಾಯರ್,
ಭಾಸ್ಕರ ನಾಯರ್, ಎನ್.ಎ.ಗಂಗಾಧರ ನೆಡ್ಚಿಲು, ಅಮ್ಮು ರೈ ಅರಂಬೂರು, ಮೋಹನ ನಾಯ್ಕ್ ಅರಂಬೂರು, ನಾರಾಯಣ ರೈ ಅರಂಬೂರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking