ಭವ್ಯ ಸ್ವಾಗತ : ನಗರದಲ್ಲಿ ಮೆರವಣಿಗೆ

ಗೋಸೇವಾ ಗತಿವಿಧಿ ಕರ್ನಾಟಕ, ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ಇದರ ಆಶ್ರಯದಲ್ಲಿ ರಾಜ್ಯವ್ಯಾಪಿ ಸಂಚರಿಸಿದ ನಂದಿ ರಥಯಾತ್ರೆ ಮಾ.15ರಂದು ಸಂಜೆ ಸುಳ್ಯಕ್ಕೆ ಆಗಮಿಸಿತು.
ರಥಯಾತ್ರೆ ಸುಳ್ಯ ಜ್ಯೋತಿ ಸರ್ಕಲ್ ತಲುಪುತಿದ್ದಂತೆ ಶಾಸಕಿ ಭಾಗೀರಥಿ ಮುರುಳ್ಯ ನಂದಿಗೆ ಹಾರಹಾಕಿ ಸ್ವಾಗತಿಸಿದರು. ಅಕಾಡೆಮಿ ಆಫ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಪುಷ್ಪಾರ್ಚನೆಗೈದರು.

ನಂದಿ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಅಕ್ಷಯ್ ಕೆ.ಸಿ., ಕಾರ್ಯಾಧ್ಯಕ್ಷ ಪತಂಜಲಿ ಭಾರದ್ವಾಜ್, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ನಂದಿ ರಥಯಾತ್ರೆ ಸಮಿತಿಯ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.