ಗುತ್ತಿಗಾರು : ಸೈoಟ್ ಮೇರಿಸ್ ಚರ್ಚಿನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

0

ಸೈoಟ್ ಮೇರಿಸ್ ಚರ್ಚ್ ಗುತ್ತಿಗಾರು ಇಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 7, 8, 9 ರಂದು ನಡಯಲಿದೆ. ಫೆ. 7 ರ ಸಂಜೆ ಧರ್ಮಗುರು ಫಾ. ಆದರ್ಶ್ ಜೋಸೆಫ್ ಧ್ವಜಾರೋಹಣ ನಡಸುವ ಮೂಲಕ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ. ಫೆ. 8 ರ ಸಂಜೆ 4.45 ಕ್ಕೆ ದಿವ್ಯ ಬಲಿಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಫೆ.8 ರ ಸಂಜೆ 6.45 ಕ್ಕೆ ಗುತ್ತಿಗಾರು ಕೆಳಗಿನ ಪೇಟೆಯಿಂದ ವರ್ಣ ರಂಜಿತ ಮೆರವಣಿಗೆ ನಡೆಯಲಿದ್ದು. ರಾತ್ರಿ ಅನ್ನಸಂತರ್ಪಣೆ ( ನಡೆಯಲಿದೆ. ಸಾರ್ವಜನಿಕರು ಈ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೋರಲಾಗಿದೆ.