ಚಾವಡಿಯಿಂದ ಮಾಡಾರಮನೆಗೆ ಉಳ್ಳಾಕುಲು ದೈವದ ಭಂಡಾರ ಆಗಮಿಸಿ
ದೈವಗಳನೇಮೋತ್ಸವ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿದ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನ ಮಾಡಾರಮನೆ ಗುಂಡ್ಯ ಸಾನಿಧ್ಯದ ಮೊರಂಗಲ್ಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ಚಾವಡಿಯ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇ| ಕುಂಟಾರು ವಾಸುದೇವ ತಂತ್ರಿಯವರ ಹಾಗೂ ಬ್ರಹ್ಮಶ್ರೀ ವೇ|ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಫೆ.2 ಮತ್ತು 3 ರಂದು ಜರುಗಿತು.

ಫೆ.2 ರಂದು ಬೆಳಗ್ಗೆ ನೂತನ ಚಾವಡಿಯಲ್ಲಿ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮೊರಂಗಲ್ಲು ಸಪರಿವಾರ ಶ್ರೀ ಧೂಮಾವತಿ ದೈವಸ್ಥಾನದಿಂದ ಮೊರಂಗಲ್ಲು ಬೈಲಿನ ಪರಿಸರದವರಿಂದ ಹಸಿರುವಾಣಿ ಸಮರ್ಪಣೆಯ ಮೆರವಣಿಗೆಯು ಚಾವಡಿಗೆ ಸಾಗಿ ಬಂತು. ದೈವಸ್ಥಾನದ ಆಡಳಿತ ಮೊಕ್ತೇಸರರಾದ ಗುರು ಪ್ರಸಾದ್ ರೈ ಮೊರಂಗಲ್ಲು ಮತ್ತು ಮುತ್ತಪ್ಪ ಪೂಜಾರಿ ಯವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಸಾಯಂಕಾಲ ಕುಂಟಾರು ಕ್ಷೇತ್ರದತಂತ್ರಿವರ್ಯರಿಂದ ಚಾವಡಿಯಲ್ಲಿ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಕ್ಷೋಘ್ನ ಹೋಮ,ವಾಸ್ತು ಬಲಿ ಪೂಜೆಯು ನೆರವೇರಿತು. ಆಗಮಿಸಿದ ಎಲ್ಲರಿಗೂ ರಾತ್ರಿ ಅನ್ನ ಸಂತರ್ಪಣೆ ಯಾಯಿತು.
ಮರುದಿನ ಬೆಳಗ್ಗೆ
ಗಣಪತಿ ಹವನ ನಡೆದು
ಗುಂಡ್ಯಮಾಡಾರಮನೆಯ ದೈವಸ್ಥಾನದಲ್ಲಿ ಇರ್ವೆರ್ ಶ್ರೀ ಉಳ್ಳಾಕುಲು ದೈವಗಳ ವಿಗ್ರಹ ಪ್ರತಿಷ್ಠಾ ಕಾರ್ಯವು ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಡಾರಮನೆ ದೈವಸ್ಥಾನದ ಅಧ್ಯಕ್ಷರಾದ ಅಶೋಕ ಪ್ರಭು ಹಾಗೂ ನಾಲ್ಕು ಸ್ಥಾನಿಕ ಮನೆಯ ಕುಟುಂಬಸ್ಥರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ
ಮೊರಂಗಲ್ಲು ಉಳ್ಳಾಕುಲು ಚಾವಡಿ ಯಲ್ಲಿ ಶ್ರೀ ದೈವಗಳ ಆಯುಧ ಪ್ರತಿಷ್ಠೆಯಾಗಿ ಕಲಶವು ನೆರವೇರಿತು. ಬಳಿಕಮಹಾಪೂಜೆಯಾಗಿ ನಿತ್ಯ ನೈಮಿತ್ಯಾದಿ ನಿರ್ಣಯವಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಅದೇ ದಿನ ಸಂಜೆ ಮೊರಂಗಲ್ಲು ನೂತನ ಉಳ್ಳಾಕುಲು
ಚಾವಡಿಯಿಂದ ಗುಂಡ್ಯ ,ಪರಿವಾರ, ದೇವಸ್ಯ, ಪಂಜಿಮಲೆ ನಾಲ್ಕು ಸ್ಥಾನಿಕ ಮನೆಯ ಪೂಜಾರಿಯವರ ನೇತೃತ್ವದಲ್ಲಿ ಭಂಡಾರ ಹೊರಟು ಸದಾಶಿವ ದೇವಸ್ಥಾನಕ್ಕೆ ಭೇಟಿಯಾಗಿ ಅಲ್ಲಿಂದ ಮದಿಮಾಲೆ ಪಾರೆಯಾಗಿ ಗುಂಡ್ಯ ಮಾಡಾರಮನೆಗೆ ಆಗಮಿಸಿತು. ನಂತರ ದೈವಸ್ಥಾನದಲ್ಲಿ ಭಂಡಾರ ಏರಿ ರಾತ್ರಿ ಶ್ರೀ ಉಳ್ಳಾಕುಲು ದೈವದ ಕಿರಿಯರ ಮತ್ತು ಹಿರಿಯರ ನೇಮೋತ್ಸವ ನಡೆದು ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಯಾಯಿತು. ಮರುದಿನ ಬೆಳಿಗ್ಗೆ ಮಲೆ ಚಾಮುಂಡಿ ದೈವ, ಪುರುಷ ದೈವ, ಕುಪ್ಪೆ ಪಂಜುರ್ಲಿ, ಮದಿಮಾಲ್ ದೈವ, ಅಜ್ಜಿ ದೈವ ಹಾಗೂ ಕೂಜಿ ದೈವಗಳ ನೇಮೋತ್ಸವ ನಡೆಯಿತು. ನಂತರ ಶ್ರೀ ಉಳ್ಳಾಕುಲು ದೈವದ ಭಂಡಾರ ಇಳಿದು ಮೊರಂಗಲ್ಲು ಉಳ್ಳಾಕುಲು ಚಾವಡಿಗೆ ಆಗಮಿಸುವ ಮೂಲಕ ನೇಮೋತ್ಸವವು ಸಮಾಪನಗೊಂಡಿತು. ಮಧ್ಯಸ್ಥರಾಗಿ ಅಶೋಕ ಕೊರಂಬಡ್ಕ, ಸುಧಾಮ ಆಲೆಟ್ಟಿ ಯವರು ಸಹಕರಿಸಿದರು.
ಸದಾಶಿವ ದೇವಸ್ಥಾನದ ಮೊಕ್ತೇಸರರಾದ ಹೇಮಚಂದ್ರ ಬೈಪಡಿತ್ತಾಯ,
ಶ್ರೀಪತಿ ಬೈಪಡಿತ್ತಾಯ, ಜಯಪ್ರಕಾಶ್ ಬೈಪಡಿತ್ತಾಯ, ಗಗನ್ ಬೈಪಡಿತ್ತಾಯ, ಅರ್ಚಕರಾದ ಹರ್ಷಿತ್ ಬನ್ನಿಂತಾಯ,
ಗುಂಡ್ಯ ಮಾಡಾರಮನೆ ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು,
ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಸಿ.ಪ್ರಸನ್ನ ಬಡ್ಡಡ್ಕ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ರಾಮಚಂದ್ರ ಆಲೆಟ್ಟಿ, ಒತ್ತೆಕೋಲ ಸಮಿತಿ ಅಧ್ಯಕ್ಷ ಸುಧಾಕರ ಆಲೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಜನಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಒತ್ತೆಕೋಲ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಆಲೆಟ್ಟಿ
ಸದಾಶಿವ ಭಜನಾ ಸಂಘ, ಯುವಕ ಮಂಡಲ,
ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಮಹಿಳಾ ಸದಸ್ಯರು, ಸ್ಥಳೀಯರು ನಿರಂತರವಾಗಿ ಸ್ವಯಂ ಸೇವಕರಾಗಿ ಸಹಕರಿಸಿದರು.