ಮನರಂಜಿಸಿದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು

ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.8 ರಂದು ಪ್ರಾರಂಭಗೊಂಡಿದ್ದು ಫೆ.10 ರ ವರೆಗೆ ನಡೆಯಲಿದೆ.


ಫೆ.8 ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ,ಗಂಟೆ ಉಗ್ರಾಣ ಮುಹೂರ್ತ, ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ರಂಗಪೂಜೆಗಳು ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ, ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ, ವ್ಯ.ಸ.ಸದಸ್ಯರಾದ ಶ್ರೀಮತಿ ಶೀಲಾವತಿ ಕುಳ್ಳಂಪಾಡಿ, ಗೌಡ ಮಡ್ತಿಲ, ಕರುಣಾಕರ ಯು.ಉದ್ದಂಪಾಡಿ, ಶ್ರೀಮತಿ ಆಶಾ ಎಂ.ಎಸ್.ಮಡ್ತಿಲ, ಶಿವರಾಮ ಗೌಡ ಎನ್.ನೆಕ್ರಪ್ಪಾಡಿ, ರಾಧಾಕೃಷ್ಣ ಸಿ.ಚಾಕೋಟೆ, ಮುರಳೀಧರ ಕೆ.ಕೊಚ್ಚಿ ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು



ಫೆ.08 ರಂದು ರಾತ್ರಿ ಅಂಗನವಾಡಿ ಕೇಂದ್ರ ಮತ್ತು ದೇರಾಜೆ ಶಾಲಾ ಮಕ್ಕಳು “ಬಾಲಗೋಕುಲ” ಮಕ್ಕಳಿಂದ ಹಾಗೂ ಶ್ರೀ ಗುರುದೇವ ಭಜನಾ ಮಂಡಳಿ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಗೆಳೆಯರ ಬಳಗ ದೇರಾಜೆ ಐವರ್ನಾಡು ಇವರ ಪ್ರಾಯೋಜಕತ್ವದಲ್ಲಿ “ನೃತ್ಯ ಸಂಭ್ರಮ” ನಡೆಯಿತು. ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮನರಂಜಿಸಿತ್ತು.