ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಎಸ್.ಡಿ.ಎಂ. ಕಾಲೇಜು, ಉಜಿರೆಯ ಸಹಭಾಗಿತ್ವದಲ್ಲಿ ಫೆ. 17 ಹಾಗೂ 18ರಂದು ಎರಡು ದಿನಗಳ “ಪ್ರಗತಿಯ ಹಾದಿಯಲ್ಲಿ ವಿಕಾಸದ ಭಾರತಕ್ಕಾಗಿ ಮಹಿಳಾ ಕೌಶಲ್ಯ ವರ್ಧನೆ ” ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ಸಮ್ಮೇಳನ ನಡೆಯಲಿರುವುದು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಎ.ಎಸ್. ಸಮ್ಮೇಳನದ ಅಧ್ಯಕ್ಷತೆ ವಹಿಸದಿದ್ದು, ಉಜಿರೆ ರುಡ್ ಸೆಟ್ ನ ಹಿರಿಯ ಶ್ರೇಣಿ ಉಪನ್ಯಾಸಕಿ ಅನಸೂಯ ಉದ್ಘಾಟಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾl ದಿನೇಶ್ ಪಿ.ಟಿ.ತಿಳಿಸಿರುತ್ತಾರೆ.