ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಎಂ.ಕೃಷ್ಣಪ್ಪ ಅಧಿಕಾರ ಸ್ವೀಕಾರ

0

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಎಂ.ಕೃಷ್ಣಪ್ಪ ಎಂಬವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದ್ದು ಫೆ.21ರಂದು ಅವರು ಸುಳ್ಯಕ್ಕೆ‌ ಬಂದು ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಭಾರ ಶಿಕ್ಷಣಾಧಿಕಾರಿಯಾಗಿದ್ದ ಶೀತಲ್ ಯು.ಕೆ.ಯವರು ಅಧಿಕಾರ ಹಸ್ತಾಂತರ ಮಾಡಿದರು.

ಕೊಡಗು ಡಯಟ್ ನಲ್ಲಿ ಉಪನ್ಯಾಸಕರಾಗಿದ್ದ ಇವರು ಇದೀಗ ಸುಳ್ಯಕ್ಕೆ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡು ಬಂದಿದ್ದಾರೆ.

ಮಂಗಳೂರಿನಲ್ಲಿ ಬಿಎಡ್ ಶಿಕ್ಷಣ ಹಾಗೂ ಎಂ.ಎ. ಪದವಿಯನ್ನು ಪಡೆದಿದ್ದರು. ಇವರು ಕುಶಾಲನಗರ ದವರು.