ಕಾಂಗ್ರೆಸ್ ಮುಖಂಡ ಕೆ. ಗೋಕುಲ್ ದಾಸ್ ಆಗ್ರಹ
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ಇವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಇವರು ಆಯ್ಕೆ ಮಾಡಿರುತ್ತಾರೆ. ಇವರು ಆಯ್ಕೆ ಮಾಡಿ ಆದೇಶ ನೀಡಿದ ನಂತರ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ಮಾಡಲು ಮಾಧ್ಯಮ ಪ್ರಕಟಣೆ ನೀಡಿ , ಪ್ರಚಾರ ಫಲಕ, ಆಮಂತ್ರಣ ಪತ್ರಿಕೆ, ಊಟದ ವ್ಯವಸ್ಥೆ, ಸಭಾಭವನ ಮತ್ತು ಅತಿಥಿಗಳನ್ನು ಆಹ್ವಾನಿಸುವ ಕಾರ್ಯವನ್ನು ಈಗಾಗಲೇ ಮಾಡಿ ಆಗಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಮುಂಗಡ ಹಣವನ್ನು ಪಾವತಿಸಿ ಕಾರ್ಯ ಪ್ರವೃತ್ತರಾಗಿದ್ದ ಈ ಸಮಯದಲ್ಲಿ ಪದಗ್ರಹಣ ಸಮಾರಂಭಕ್ಕೆ ತಾತ್ಕಾಲಿಕ ತಡೆ ನೀಡಿರುವ ವಿಷಯ ತಿಳಿದು ನಮಗೆಲ್ಲರಿಗೂ ನೋವುಂಟಾಗಿದೆ. ಈಗಾಗಲೇ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಕೊರತೆಯಿಂದಾಗಿ ಈ ಹಿಂದೆ ನಡೆದ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿ ನಾಯಕರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬಂದಿರುತ್ತದೆ.
ಕೇವಲ ನಾಲ್ಕು ಜನ ನಾಯಕರ ಮಾತಿಗೆ ಬೆಲೆ ನೀಡಿ ಈ ರೀತಿಯಲ್ಲಿ ರಾಜ್ಯಾಧ್ಯಕ್ಷರು ಕೈಗೊಂಡ ತಡೆಯಾಜ್ಞೆ ಕ್ರಮ ಸರಿಯಲ್ಲ. ಈ ನಡೆಯಿಂದಾಗಿ ಗ್ರಾಮ ಗ್ರಾಮದ ಯುವ ಉತ್ಸಾಹಿ ಕಾರ್ಯಕರ್ತರಿಗೆ ಬೇಸರ ಉಂಟಾಗಿರುವುದಲ್ಲದೇ ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿಗೆ ಸ್ಪರ್ಧಿಸುವ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕಲಿದ್ದಾರೆ. ಆದ್ದರಿಂದ ಪಕ್ಷದ ಉಳಿವಿಗಾಗಿ ಜಿಲ್ಲಾ ಮತ್ತು ರಾಜ್ಯದ ನಾಯಕರುಗಳು ರಾಧಾಕೃಷ್ಣ ಬೊಳ್ಳೂರು ಅವರನ್ನೇ ಬ್ಲಾಕ್ ಅಧ್ಯಕ್ಷರಾಗಿ ಮುಂದುವರೆಸಲು ತಡೆಯಾಜ್ಞೆ ತೆರವುಗೊಳಿಸಿ ಅವಕಾಶ ಮಾಡಿಕೊಟ್ಟಲ್ಲಿ ಗ್ರಾಮೀಣ ಮಟ್ಟದ ಯುವಕರಿಗೆ ನ್ಯಾಯ ಕೊಟ್ಟಂತಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ
ಕೆ.ಗೋಕುಲ್ ದಾಸ್ ರವರು ಅಗ್ರಹಿಸಿದ್ದಾರೆ.