ಮಹಾಜನ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು
ದ.ಕ. ಜಿಲ್ಲೆಯಲ್ಲಿ ಕ್ಯಾನ್ಸರ್‌ನಂತೆ ಪಸರಿಸಿರುವ ಕೋಮುವಾದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ..ಪ್ರಭಾಕರ ಶಿಶಿಲ ಅಭಿಮತ
ಹತ್ತನೇ ತರಗತಿಯವರೆಗಿನ ಶಿಕ್ಷಣವನ್ನು ಸುಗ್ರೀವಾಜ್ಞೆಯ ಮೂಲಕ ರಾಷ್ಟ್ರೀಕರಿಸಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕು.
ಮಹಾಜನ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು,
ದ.ಕ. ಜಿಲ್ಲೆಯಲ್ಲಿ ಕ್ಯಾನ್ಸರ್‌ನಂತೆ ಪಸರಿಸಿರುವ ಕೋಮುವಾದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು ಎಂದು ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ಮಂಗಳೂರು ವಿ.ವಿ.ಯ ಮಂಗಳಾ ಸಭಾಭವನದಲ್ಲಿ ನಡೆಯುತ್ತಿರುವ
27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನವನ್ನು ಕರ್ನಾಟಕದ ರಾಜ್ಯಕಲೆ ಎಂದು ಘೋಷಿಸಿ, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.ಕನ್ನಡ ಕೃತಿಗಳನ್ನು ಕೊಂಡು ಓದುವ ಮೂಲಕ ಕನ್ನಡ ಸಂಸ್ಕೃತಿಯೊಂದನ್ನು ರೂಪಿಸಬೇಕು.ನೇತ್ರಾವತಿ ತಿರುವು ಯೋಜನೆಯನ್ನು ಕೈ ಬಿಡಬೇಕು.
ಪಶ್ಚಿಮಘಟ್ಟ ಪ್ರದೇಶದ ಸೂಕ್ಷ್ಮತೆಯನ್ನು ಸಂರಕ್ಷಿಸಬೇಕು.
ಮಹಾಜನ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು.




ಕಾವೇರಿ ನದಿನೀರಿನ ಹಂಚಿಕೆಗೆ ಹೊಸ ಸೂತ್ರವೊಂದು ರೂಪುಗೊಳ್ಳಬೇಕು.
ಮೇಕೆದಾಟು ಮತ್ತು ಕಳಸ ಬಂಡೂರಿ ಯೋಜನೆಗಳಿಗೆ ಕೇಂದ್ರ ಅನುಮತಿ ನೀಡಬೇಕು.
ದ.ಕ. ಜಿಲ್ಲೆಯಲ್ಲಿ ಕ್ಯಾನ್ಸರ್‌ನಂತೆ ಪಸರಿಸಿರುವ ಕೋಮುವಾದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು. ಸಂಸ್ಕೃತಿಯ ಬಹುತ್ವವನ್ನು ಕಾಪಾಡಿ, ಸಂವಿಧಾನದ ಆಶಯಗಳ ತಕ್ಕಂತೆ ನಡೆದು ಕೋಮು ಸೌಹಾರ್ದತೆ ಉಂಟು ಮಾಡಬೇಕು ಎಂದು ಹೇಳಿದ ಅವರು
ವ್ಯವಸ್ಥೆಯ ಬದಲಾವಣೆಗಾಗಿ ಸಾಹಿತ್ಯ ರಚಿಸಬೇಕು.
ಸಾಹಿತ್ಯದ ಉದ್ದೇಶ, ಅಜ್ಞಾನ ಮತ್ತು ಅಸಮಾನತೆ ನಿವಾರಣೆ.
ಕೆಳಸ್ತರದ ತಳ ಸಮುದಾಯಗಳನ್ನು ಸಾಹಿತ್ಯದತ್ತ ಆಕರ್ಷಿಸುವ ಬಂಡಾಯ ಮತ್ತು ದಲಿತ ಸಾಹಿತ್ಯ ಪ್ರಕಾರಗಳು ಇನ್ನಷ್ಟು ಅಭಿವೃದ್ಧಿಗೊಳ್ಳಬೇಕು. ಎಂದು ಹೇಳಿದರು.