ಮುರುಳ್ಯ ಗ್ರಾಮದ ಅಲೆಕ್ಕಾಡಿ ಕಾಲನಿಯ ಬೇಡುರವರು ಅಲ್ಪ ಕಾಲದ ಅಸೌಖ್ಯ ದಿಂದ ಫೆ 21 ರಂದು ಸ್ವ ಗ್ರಹದಲ್ಲಿ ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು.
ಶ್ರಮ ಜೀವಿಯಾಗಿದ್ದ ಇವರು ಕೂಲಿಕಾರ್ಮಿಕರಾಗಿ, ಕರಕುಶಲಕರ್ಮಿಯಾಗಿ, ಬುಟ್ಟಿ, ಕುಕ್ಕೆ ಹೆಣೆದು ಮನೆ ಮನೆಗೆ ಮುಟ್ಟಿಸುತ್ತಿದ್ದರು.
ಮೃತರು ಪತ್ನಿ ಬಿತ್ತ್ರು, ಪುತ್ರಿಯರಾದ ರಾಗಿಣಿ, ಗುರುವ, ಭಾಗೀರಥಿ, ಪಿಜಾವು ಕಾಲನಿ, ಜಾನಕಿ ಸಂಜೀವ, ಕುಸುಮ, ಹಾಗೂ ಮೊಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.