ಬೊಮ್ಮಾರು ಮೊವರ್ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ನೇಮೋತ್ಸವ – ಸಭಾ ಕಾರ್ಯಕ್ರಮ – ಧಾರ್ಮಿಕ ಉಪನ್ಯಾಸ – ಸನ್ಮಾನ

0

ಇಂದು ಶ್ರೀ ಶಿರಾಡಿ ಯಾನೆ ರಾಜನ್ ದೈವದ ನೆಮೋತ್ಸವ

ಧರ್ಮದಲ್ಲಿರುವ ಮೌಢ್ಯತೆಯನ್ನು ಹೋಗಲಾಡಿಸಿ, ಧರ್ಮದ ಚೌಕಟ್ಟಿನಲ್ಲಿ ಬದುಕು ಸಾಗಬೇಕು : ಧಾರ್ಮಿಕ ಉಪನ್ಯಾಸದಲ್ಲಿ ಚಂದ್ರಹಾಸ ಮೂರೂರು

ಹಿಂದೂ ಧರ್ಮದ ದೈವ ದೇವರ ಹೆಸರಿನಲ್ಲಿ ಇದ್ದ ಸಂಸ್ಕಾರದ ಅನೇಕ ವಿಚಾರಗಳಿಗೆ ಅನ್ಯರು ಮೌಢ್ಯತೆಯ ಬೀಜವನ್ನು ಬಿತ್ತಿದ್ದಾರೆ. ಇದನ್ನು ಹಿಂದುಗಳಾದ ನಾವೆಲ್ಲ ಒಗ್ಗಟ್ಟಾಗಿ ಕಿತ್ತೊಗೆಯಬೇಕು. ಆ ಮೂಲಕ ಧರ್ಮದ ಧರ್ಮಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಹಿಂದೂ ಹಿತ ಚಿಂತಕ ಚಂದ್ರಹಾಸ ಮೂರುರು ಹೇಳಿದರು.

ಅವರು ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಬೊಮ್ಮಾರು ಮೂವರ್ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ನೇಮೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೂವರ್ ದೈವಸ್ಥಾನದ ಅಧ್ಯಕ್ಷ ದಿನೇಶ್ ಬೊಮ್ಮಾರು ವಹಿಸಿದ್ದರು.

ಇದೇ ಸಂದರ್ಭದಲ್ಲಿ ದೈವಸ್ಥಾನದ ಸಭಾಂಗಣದ ಅಭಿವೃದ್ಧಿಗೆ ಕೊಡುಗೆ ನೀಡಿದ
ಅನ್ನಪೂರ್ಣೇಶ್ವರಿ ಯೋಗಿಶ್ವರ ಸಿದ್ಧಮಠ ಮರ್ಕಂಜದ ಧರ್ಮದರ್ಶಿ, ಕರ್ನಾಟಕ ರಾಜ್ಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ನಾಥ್ ಜಿ ದೇಶಕೋಡಿ ಇವರನ್ನು ದೈವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ರೈ ರೆಂಜಾಳ ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೋಲಿಕೆ, ಮರ್ಕಂಜ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಮೂವರ್ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಯತೀಶ್ ಬೊಮ್ಮರು, ಗಜಾನನ ಮಿತ್ರ ಮಂಡಳಿ ಬೊಮ್ಮರು ಇದರ ಅಧ್ಯಕ್ಷ ನಿತೇಶ್ ಎರ್ಮೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಂದ್ರ ಬೊಮ್ಮರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಹರ್ಷಿತ್ ಮಿತ್ತಡ್ಕ ಮತ್ತು ರಾಜೇಶ್ ಮಾಸ್ಟರ್ ರೆಂಜಾಳ ಕಾರ್ಯಕ್ರಮ ನೀರೂಪಿಸಿದರು.

ನಿತೇಶ್ ಎರ್ಮೆಟ್ಟಿ ವಂದಿಸಿದರು.

ಕಾರ್ಯಕ್ರಮಗಳು:
ಫೆ.22ರಂದು ಬೆಳಿಗ್ಗೆ ಗಣಪತಿ ಹವನ, ದೈವಗಳ ತಂಬಿಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು ನಡೆಯಿತು.

ಸಂಜೆ ಮಿತ್ತಡ್ಕ, ರೆಂಜಾಳ ಮತ್ತು ದಾಸರಾಬೈಲು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿದ್ಯ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ಶ್ರೀ ಮಹಾವಿಷ್ಣು ಯಕ್ಷಗಾನ ಕಲಾ ತಂಡ ಮಾವಿನಕಟ್ಟೆ ಇವರಿಂದ ಕದಂಬ ಕೌಶಿಕೆ ಯಕ್ಷಗಾನ ನಡೆಯಿತು.
ಇದೇ ಸಂದರ್ಭದಲ್ಲಿ ಯಕ್ಷಗಾನಡ ಹಿರಿಯ ಕಲಾವಿದರನ್ನು ಗೌರವಿಸಲಾಯಿತು.
ನಂತರ ದೈವಗಳ ನೇಮೋತ್ಸವ ಜರಗಿತು.

ಇಂದು ಶ್ರೀ ಶಿರಾಡಿ ಯಾನೆ ರಾಜನ್ ದೈವದ ನೆಮೋತ್ಸವ ನಡೆಯಲಿದೆ.