ಪುತ್ತೂರಿನಿಂದ ಸುಳ್ಯಕ್ಕೆ ಬಸ್ಸಿಲ್ಲದೆ ಪ್ರಯಾಣಿಕರ ಪರದಾಟ

0

ಸಂಜೆ 7 ಘಂಟೆಯಿಂದ ಸುಳ್ಯಕ್ಕೆ ಬಸ್ಸುಗಳ ಕೊರತೆ

ಕೆಲಸ ಬಿಟ್ಟು ಮನೆಗೆ ತೆರಳಲು ಬಸ್ಸಿಲ್ಲದೆ ಜನರ ಗೋಳು

ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಿಂದ ಸಂಜೆಯಾಗುತ್ತಿದ್ದಂತೆ ಸುಳ್ಯ ಕಡೆ ತೆರಳುವ ಬಸ್ಸುಗಳ ಕೊರತೆ ಉಂಟಾಗುತ್ತಿದೆ.

ಸಂಜೆ ಕಚೇರಿ, ಸಂಸ್ಥೆ ಗಳಲ್ಲಿ ಕೆಲಸ ನಿರ್ವಹಿಸಿ ಮನೆಗೆ ತೆರಳಲು ಪ್ರಯಾಣಿಕರು ಬಂದು ಬಸ್ಸಿಗಾಗಿ ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣ ವಾಗಿದೆ.ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಸಮಸ್ಯೆ ಕಾಡುತ್ತಿದೆ.

ಅಪ್ಪಿ ತಪ್ಪಿ ಬರುವ ಒಂದು ಬಸ್ಸಿನಲ್ಲಿ ಹತ್ತಲು ಜನರು ಹರ ಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಸಂಭಂದ ಪಟ್ಟವರು ಇತ್ತ ಗಮನ ಹರಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.