ಮುಹಿಯದ್ದೀನ್ ಜುಮ್ಹಾ ಮಸೀದಿ ಕಲ್ಲುಗುಂಡಿ ಇದರ ಪಳ್ಳಿ ನೇರ್ಚೆ ಹಾಗೂ ಮಹಾಸಭೆಯು 21 ರಂದು ಹಯಾತುಲ್ ಇಸ್ಲಾಂ ಮದರಸ ಹಾಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಮಸೀದಿ ಖತೀಬ್ ಬಹುಮಾನ್ಯ ನಾಸಿರ್ ದಾರಿಮಿ ಉಸ್ತಾದರ ದುವಾ ದೊಂದಿಗೆ ಉದ್ಘಾಟನೆಗೊಂಡ ಸಭೆಯ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷರಾದ ಜನಾಬ್ ಎಸ್ ಆಲಿ ಹಾಜಿ ಯವರು ವಹಿಸಿ ಕೊಂಡಿದ್ದರು. ಮಸೀದಿಯ ಕಾರ್ಯದರ್ಶಿ ಜನಾಬ್ ಮಹಮ್ಮದ್ ಹನೀಫ್ ಎಸ್. ಎ ರವರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜನಾಬ್ ಪಿ. ಎಂ. ಮುಹಮ್ಮದ್ ಇರ್ಷಾದ್ ರವರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿ ಅನುಮೋದನೆ ಯನ್ನು ಪಡೆದುಕೊಂಡರು. ಅಧ್ಯಕ್ಷರ ಅನುಮತಿ ಮೇರೆಗೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ವರುಷದ ಕಾರ್ಯ ಯೋಜನೆ ಗಳ ಬಗ್ಗೆ ನಿರ್ಣಯಿಸಲಾಯಿತು.



ವೇದಿಕೆ ಯಲ್ಲಿ ಉಪಾಧ್ಯಕ್ಷರುಗಳಾದ ಜನಾಬ್ ತಾಜ್ ಮಹಮ್ಮದ್ ಎಸ್. ಕೆ, ಜನಾಬ್ ಕೆ.ಎಂ. ಅಶ್ರಫ್, ಕೋಶಾಧಿಕಾರಿ ಅಬೂಬಕ್ಕರ್ ಸೂಪರ್, ಸದಸ್ಯರುಗಳಾದ ಜನಾಬ್ ಹಾಜಿ ಅಬ್ಬಾಸ್ ಸಂಟ್ಯಾರ್, ಜನಾಬ್ ಎ. ಕೆ. ಹನೀಫ್, ಜನಾಬ್ ರಫೀಕ್ ಕರಾವಳಿ, ಜನಾಬ್ ಸಿ. ಎಂ. ಹಸೈನಾರ್ ಅಶ್ರಫ್, ಹಾಗೂ ಜನಾಬ್ ಎಸ್. ಎಂ. ಹಂಝ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಮಾಹತಿನ ಹೆಚ್ಚಿನ ಸದಸ್ಯರುಗಳು ಹಾಗೂ ಯುವಕರು ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಿ ಸಹಕರಿಸಿದರು.ಪಳ್ಳಿ ನೇರ್ಚೆ ಯ ಬಳಿಕ ಸರ್ವರಿಗೂ ತಬರ್ರುಕ್ (ಸೀರಣಿ )ವಿತರಣೆ ನಡೆಸಿ ಕಾರ್ಯಕ್ರಮ ವನ್ನು ಕೊನೆಗೊಳಿಸಲಾಯಿತು