ಭರತನಾಟ್ಯ ಸೀನಿಯರ್ ಮತ್ತು ಅಖಿಲ ಭಾರತ ಗಂಧರ್ವ ಪರೀಕ್ಷೆಯಲ್ಲಿ ಸ್ತುತಿ ರೈ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ 2024-25ರಲ್ಲಿ ನಡೆಸಿದ ಭರತನಾಟ್ಯಂ ವಿಭಾಗದ ಸೀನಿಯರ್ ಪರೀಕ್ಷೆಯಲ್ಲಿ ಮತ್ತು ಮುಂಬಯಿಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ 2024ರ ನವೆಂಬರ್ ನಲ್ಲಿ ನಡೆಸಿದ ಪ್ರವೇಶಿಕ ಪೂರ್ಣ ಪರೀಕ್ಷೆಯಲ್ಲಿ ಅಡ್ಡಬೈಲಿನ ಸ್ತುತಿ ರೈ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರ್ ಇದರ ಗುರುಗಳಾದ ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ನಯನ ವಿ ರೈ ಮತ್ತು ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ ಇವರ ಶಿಷ್ಯೆಯಾಗಿರುವ ಸ್ತುತಿ ರೈ ನಿಂತಿಕಲ್ಲಿನ ಕೆ.ಎಸ್. ಗೌಡ ಪ.ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಹಾಗೂ ಅಡ್ಡಬೈಲಿನ ತಾರಾನಾಥ ರೈ ಐಗಿರಿ ಹಾಗೂ ಶ್ರೀಮತಿ ಸುರೇಖಾ ಟಿ. ರೈ ದಂಪತಿಯ ಪುತ್ರಿ.