ಪೆರುವಾಜೆ: ಮುರ್ಕೆತ್ತಿ ಅಂಗನವಾಡಿ ನೂತನ ಕಟ್ಟಡ ಸಮಿತಿ ರಚನೆ

0

ಗೌರವಾಧ್ಯಕ್ಷರಾಗಿ ಶ್ರೀಮತಿ ಶಹಿನಾಜ್, ಅಧ್ಯಕ್ಷರಾಗಿ ವೆಂಕಪ್ಪ ಗೌಡ, ಕಾರ್ಯಾಧ್ಯಕ್ಷರಾಗಿ ಸಚಿನ್ ರಾಜ್ ಶೆಟ್ಟಿ

ಪೆರುವಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ್ಕೆತ್ತಿ ಅಂಗನವಾಡಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಿದ್ದು ಇದಕ್ಕೆ ಕಟ್ಟಡ ಸಮಿತಿ ರಚನೆ ಮಾಡಿದ್ದು ಸಮಿತಿಯ ಗೌರವ ಅಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ. ಶ್ರೀಮತಿ ಶಹಿನಾಜ್ ಅಬ್ದುಲ್ ರಹೀಂ ಅವರನ್ನು ಆಯ್ಕೆ ಮಾಡಲಾಯಿತು, ಅಧ್ಯಕ್ಷ ರಾಗಿ ವೆಂಕಪ್ಪ ಗೌಡ ನಾರ್ಕೋಡು, ಕಾರ್ಯಾಧ್ಯಕ್ಷ ರಾಗಿ ಸಚಿನ್ ರಾಜ್ ಶೆಟ್ಟಿ,
ಗೌರವ ಸಲಹೆಗಾರರಾಗಿ ಇಬ್ರಾಹಿಂ ಅಂಬಟೆಗದ್ದೆ ಉಪಾಧ್ಯಕ್ಷ ರಾಗಿ ಶ್ರೀಮತಿ ವನಜಾ ಬಿ, ಶ್ರೀಮತಿ ವಂದನಾ, ಶ್ರೀಮತಿ ಕೈರುನ್ನಿಸಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಚಂದ್ರಾವತಿ ಹಾಗೂ ಸದಸ್ಯರಾಗಿ 20 ಮಂದಿಯನ್ನು ಆಯ್ಕೆ ಗೊಳಿಸಲಾಯಿತು.