
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಕಾಚುಕುಜುಂಬ, ಉಳ್ಳಾಕ್ಲು ಗರಡಿಬೈಲು ಮೂಲಸ್ಥಾನ ಸನ್ನಿಧಿಯಲ್ಲಿ ಸಾನಿಧ್ಯಾದಿಗಳ ಗುಣದೋಷ ಚಿಂತನೆಗೋಸ್ಕರ ಒಂದು ದಿನದ ತಾಂಬೂಲ ಪ್ರಶ್ನಾ ಚಿಂತನೆಯು ಫೆ 28 ರಂದು ಮುಂಜಾನೆ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನಾರಾಯಣ ರಂಗಾ ಭಟ್ಟ ಮಧೂರು ಹಾಗು ದೈವಜ್ಞರಾದ ಶ್ರೀ ಸತ್ಯನಾರಾಯಣ ಭಟ್ ಶ್ರೀ ಮಾತಾ ಪಂಜ ಇವರ ಸಹಯೋಗದೊಂದಿಗೆ ಆರಂಭ ಗೊಂಡಿತ್ತು.




ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ಧರ್ಮಪಾಲ ಗೌಡ ಮರಕ್ಕಡ, ಧರ್ಮಣ್ಣ ನಾಯ್ಕ ಗರಡಿ, ಸಂತೋಷ್ ರೈ ಪಲ್ಲತ್ತಡ್ಕ, ರಾಮಚಂದ್ರ ಭಟ್, ಮಾಯಿಲಪ್ಪ ಗೌಡ ಎಣ್ಮೂರು ಪಟ್ಟೆ,ಶ್ರೀಮತಿ ಪವಿತ್ರ ಮಲ್ಲೆಟ್ಟಿ, ಶ್ರೀಮತಿ ಮಾಲಿನಿ ಕುದ್ವ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ, ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.