ಸುಳ್ಯ ಗಾಂಧಿನಗರದ ಕೆಪಿಎಸ್ ಹಾಗೂ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳು

2024 – 25 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾರ್ಚ್ 1 ರಂದು ಆರಂಭಗೊಂಡಿದ್ದು ಇಂದು ಬೆಳಿಗ್ಗೆ ಸುಳ್ಯದ ಪರೀಕ್ಷಾ ಕೊಠಡಿಗಳಿಗೆ ವಿದ್ಯಾರ್ಥಿಗಳು ಹಾಜರಾದರು.
ಮಾರ್ಚ್ 20 ತನಕ ರಾಜ್ಯದಾದ್ಯಂತ ಪರೀಕ್ಷೆ ನಡೆಯಲಿದೆ.

ಸುಳ್ಯದಲ್ಲಿ ಗಾಂಧಿನಗರ ಕೆಪಿಎಸ್ ಕಾಲೇಜ್ ನಲ್ಲಿ 13 ಕೊಠಡಿಗಳಲ್ಲಿ 424 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 24 ಕೊಠಡಿಗಳಲ್ಲಿ 649 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಗಾಂಧಿನಗರ ಕಾಲೇಜಿನಲ್ಲಿ ಓರ್ವ ವಿಶೇಷ ಚೇತನ ವಿದ್ಯಾರ್ಥಿ ಪರೀಕ್ಷೆ ಬರೆಯಲಿದ್ದು, ಓರ್ವ ಜೂನಿಯರ್ ಕಾಲೇಜಿನಲ್ಲಿ ಇಬ್ಬರು ವಿಶೇಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯಬಹುದು ಎಂದು ಪರೀಕ್ಷಾ ಕೇಂದ್ರದ ಮೇಲುಸ್ತುವಾರಿ ವಹಿಸಿರುವಂತಹ ಕಾಲೇಜಿನ ಪ್ರಾಂಶುಪಾಲರುಗಳು ಮಾಹಿತಿ ನೀಡಿದ್ದಾರೆ.