ಪ್ರಥಮ ಜೆ.ಎಫ್ .ಸಿ ಮದೆನಾಡು ಮಡಿಕೇರಿ,ದ್ವಿತೀಯ ಸನ್ ರೈಸರ್ ಕೋಲ್ಚಾರ್

ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ದಿ.ಶರತ್ ಕುಮಾರಿ ಕಾನಡ್ಕರವರ ಸ್ಮರಣಾರ್ಥ 8 ತಂಡಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ.26 ರಂದು ಚೊಕ್ಕಾಡಿ ಪ್ರೌಢ ಶಾಲಾ ಕುಕ್ಕುಜಡ್ಕ ಮೈದಾನದಲ್ಲಿ ನಡೆಯಿತು.
ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ.20,222 ಹಾಗೂ ಟ್ರೋಫಿಯನ್ನು ಜೆ.ಎಫ್.ಸಿ.ಮದೆನಾಡು ಮಡಿಕೇರಿ ಇವರು ಪಡೆದುಕೊಂಡರು.

ದ್ವಿತೀಯ ಬಹುಮಾನ ರೂ.12,222 ಟ್ರೋಫಿಯನ್ನು ಸನ್ ರೈಸರ್ ಕೋಲ್ಚಾರ್ ತಂಡ ಪಡೆದುಕೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಕುಶ್ವಂತ್ ಕೋಳಿಬೈಲು,ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ,ಎನ್.ಕರ್ನಾಟಕ ರಾಜ್ಯ ವಾಲಿಬಾಲ್ ಎಸೋಸಿಯೇಶನ್ ಕಾರ್ಯದರ್ಶಿ ಜಯಪ್ರಕಾಶ್ ರೈ,ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ತೇಜಸ್ವಿ ಕಡಪಳ ಉಪಸ್ಥಿತರಿದ್ದರು.



ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು,ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ,
ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಕೊರತ್ಯಡ್ಕ,ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ ಉಪಸ್ಥಿತರಿದ್ದು
ಬಹುಮಾನ ವಿತರಣೆ ಮಾಡಿದರು.

ಕ್ರಿಕೆಟ್ ಪಂದ್ಯಾಟದ ಸಂಪೂರ್ಣ ನಿರ್ವಹಣೆ ಯನ್ನು ನಿತಿನ್ ಚೊಕ್ಕಾಡಿ ನಿರ್ವಹಿಸಿದರು.