ಮಡಪ್ಪಾಡಿಯಿಂದ ಬೆಳಿಗ್ಗೆ 7.00ಗಂಟೆಗೆ ಹೊರಟು ಮರ್ಕಂಜ – ದೊಡ್ಡತೋಟ ಮಾರ್ಗವಾಗಿ ಸುಳ್ಯಕ್ಕೆ ಬಸ್ಸು ಸೇವೆ (03) ಇಂದಿನಿಂದ ಪ್ರಾರಂಭವಾಗಿದೆ.

ಇದೀಗ ಮಡಪ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರ ಮೂಲಕ ಮಾಡಿದ ಪ್ರಯತ್ನದ ಫಲವಾಗಿ ಇದೀಗ ಬಸ್ಸು ಸೇವೆಯನ್ನು , ಕರ್ನಾಟಕ ಸಾರಿಗೆ ಇಲಾಖೆ ಆರಂಭಿಸಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮರವರು ತೆಂಗಿನಕಾಯಿ ಒಡೆಯುವುದರ ಮೂಲಕ ನೂತನ ಬಸ್ಸು ಸೇವೆಗೆ ಚಾಲನೆ ನೀಡಿದರು.



ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರುಗಳಾದ ಸೋಮಶೇಖರ ಕೇವಳ , ವಿಜೇಶ್ ಹಿರಿಯಡ್ಕ , ಮುಖಂಡರಾದ ಪಿ. ಸಿ.ಜಯರಾಮ , ಮಿತ್ರದೇವ ಮಡಪ್ಪಾಡಿ ಹಾಗೂ ಗ್ರಾಮಸ್ಥರಾದ ಯತೀಂದ್ರನಾಥ ಪಾಲ್ತಾಡು , ದಿನೇಶ್ ಕೊಡಪಾಲ , ವಾಸುದೇವ ನಡುಬೆಟ್ಟು , ಭೋಜರಾಜ ಪೈಲೂರು , ನಿತ್ಯಾನಂದ ಎನ್.ಟಿ, ಈಶ್ವರ ಬಳ್ಳಡ್ಕ , ಶ್ರೀಮತಿ ವಸಂತಿ ಕೊಡಪಾಲ, ಶ್ರೀಮತಿ ತೇಜಾವತಿ ಕೊಡಿಪಾಲ , ವಿನಯ ನಡುಬೆಟ್ಟು , ಬಾಲಕೃಷ್ಣ ನಡುಬೆಟ್ಟು , ಕುಸುಮಾಧರ ಕಡ್ಯ , ಧರ್ಮಪಾಲ ನಡುಬೆಟ್ಟು , ಜನಾರ್ಧನ ಬಳ್ಳಡ್ಕ ಮೊದಲಾದವರು ಉಪಸ್ಥಿತರಿದ್ದರು.