ಪಂಬೆತ್ತಾಡಿ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನದ ಕಾಮಗಾರಿಗೆ ಗುದ್ದಲಿ ಪೂಜೆ

0

ಕಲ್ಮಡ್ಕ ಗ್ರಾ.ಪಂ. ವ್ಯಾಪ್ತಿಯ ಕರಿಕ್ಕಳ – ಗೋಳಿಕಟ್ಟೆ – ಪಂಬೆತ್ತಾಡಿ ರಸ್ತೆ ಕಾಂಕ್ರಿಟೀಕರಣಕ್ಕೆ ರಾಜ್ಯ ಸರಕಾರದಿಂದ ರೂ. 2 ಕೋಟಿ ಅನುದಾನ ಮಂಜೂರಾಗಿದ್ದು, ಕರಿಕ್ಕಳದಲ್ಲಿ ಮಾ. 5ರಂದು ಗುದ್ದಲಿ ಪೂಜೆ ನಡೆಯಿತು.


ಹಿರಿಯರಾದ ಲಿಂಗಪ್ಪ ಗೌಡ ಮಡಪ್ಲಾಡಿ ದೀಪ ಬೆಳಗಿಸಿದರೆ, ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ವೆಂಕಪ್ಪ ಎನ್.ಪಿ, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಮಾಜಿ ತಾ.ಪಂ. ಸದಸ್ಯ ಗಫೂರ್ ಕಲ್ಮಡ್ಕ ಗುದ್ದಲಿ ಪೂಜೆ ನೆರವೇರಿಸಿದರು.


ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಕುಮಾರ್ ಕರಿಕ್ಕಳ ಮಾತನಾಡುತ್ತಾ ಪಂಬೆತ್ತಾಡಿ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ 2 ಕೋಟಿ ಅನುದಾನ ಮಂಜೂರಾಗಿದ್ದು, ರೂ‌. 1 ಕೋಟಿ ವೆಚ್ಚದ ಕರಿಕ್ಕಳ – ಪಂಬೆತ್ತಾಡಿ ರಸ್ತೆಯ ಕಾಂಕ್ರೀಟೀಕರಣ ಆಗಲಿದೆ. ಸೇತುವೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗಲಿರುವುದರಿಂದ ಅಲ್ಲಿ ಬಿಟ್ಟು ಪಂಬೆತ್ತಾಡಿ ಅಂಗನವಾಡಿಯ ತನಕ ಅಭಿವೃದ್ಧಿ ಆಗಲಿದೆ. ಸಮಾಜ ಕಲ್ಯಾಣ ಇಲಾಖೆಯ 2024 – 25ನೇ ಸಾಲಿನ ಪ.ಜಾತಿ ಕಾಲನಿಗಳಲ್ಲಿ ಮೂಲ ಭೂತ ಸೌಲಭ್ಯ ಯೋಜನೆಯಡಿ ಈ ಅನುದಾನ ಬಿಡುಗಡೆಗೊಂಡಿದೆ. ಇದಕ್ಕಾಗಿ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಶ್ರಮವಹಿಸಿದ್ದಾರೆ. ಅಬ್ದುಲ್ ಗಫೂರ್, ವೆಂಕಪ್ಪ ಎನ್.ಪಿ, ರಜಿತ್ ಭಟ್ಟರು ಯಾವಾಗಲೂ ನನ್ನನ್ನು ಎಚ್ಚರಿಸ್ತಾ ಇರುತ್ತಾರೆ. ಮುಂದಿನ ದಿನಗಳಲ್ಲಿ ಇನ್ನೂ 2 ಕೋಟಿ ಅನುದಾನ ತರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ, ಯು.ಟಿ. ಖಾದರ್ ರಿಗೆ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಹಿಂದೆ ಪಂಬೆತ್ತಾಡಿ ಗ್ರಾಮದ ಗೋಳಿಕಟ್ಟೆ – ಪಂಜ ದೇವಸ್ಥಾನ ರಸ್ತೆ ಸುಮಾರು 1.5 ಕೋಟಿ ಅನುದಾನದಲ್ಲಿ ಮಹೇಶ್ ಕುಮಾರ್ ಕರಿಕ್ಕಳ ಮತ್ತು ಡಾ. ಅನಿಲ್ ರವರ ಮುತುವರ್ಜಿಯಲ್ಲಿ ಕಾಂಕ್ರೀಟೀಕರಣಗೊಂಡಿರುತ್ತದೆ. ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ವೆಂಕಪ್ಪ ಎನ್.ಪಿ. ಮಾತನಾಡಿ ನಾವು ಈ ಹಿಂದೆ ಮಾಜಿ ಸಚಿವರಿಗೂ ಮನವಿ ಕೊಟ್ಟಿದ್ದೆವು. ಸುಮಾರು 7-8 ಬಾರಿ ಬೆಂಗಳೂರಿಗೂ ಹೋಗಿದ್ದೆವು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ‌. ಯಾರೋ ಪ್ರಯತ್ನಪಟ್ಟು ತಂದ ಅನುದಾನವನ್ನು ನಾವು ಮಾಡಿದ್ದು ಎಂದು ಹೇಳಿಕೊಳ್ಳುವ ಜನಪ್ರತಿನಿಧಿಗಳು ಕೆಲವರಿದ್ದಾರೆ. ಅಂತವರಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ. ಮಹೇಶ್ ಕುಮಾರ್ ಕರಿಕ್ಕಳ, ಗಫೂರ್, ರಜಿತ್ ಭಟ್ ಇವರೆಲ್ಲರ ಸಹಕಾರದಿಂದ ಈ ಅನುದಾನ ನಮ್ಮ ಗ್ರಾಮಕ್ಕೆ ಬಂದಿದೆ. ಈಗ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದರು. ಉದ್ಯಮಿ ದೇವಿಪ್ರಸಾದ್ ಜಾಕೆ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದೆ ಎಂದರು. ಕಲ್ಮಡ್ಕ ಗ್ರಾ.ಪಂ. ಸದಸ್ಯರಾದ ಪವಿತ್ರ ಕುದ್ವ, ಜಯಲತ ಕೆ.ಡಿ, ಮೀನಾಕ್ಷಿ ಕೆ, ಲೋಕೇಶ್ ಆಕ್ರಿಕಟ್ಟೆ,
ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘ ನಿರ್ದೇಶಕರಾದ ಧರ್ಮಣ್ಣ ನಾಯ್ಕ ಗರಡಿ, ಗಣೇಶ್ ಭೀಮಗುಳಿ, ದಿಲೀಪ್ ಬಾಬ್ಲುಬೆಟ್ಟು, ಶ್ರೀರಂಜಿನಿ ರಜಿತ್ ಭಟ್, ಗುರುವ ಕಲ್ಚಾರ್, ಲವಕುಮಾರ್ ಕೋಟೆಗುಡ್ಡೆ, ಮಾಜಿ ಉಪಾಧ್ಯಕ್ಷ ಕುಲ್ದೀಪ್ ಸುತ್ತುಕೋಟೆ, ಮಾಜಿ ನಿರ್ದೇಶಕ ದಿನೇಶ್ ಪಂಜದಬೈಲು, ಸ್ಥಳೀಯತಾದ ಸತ್ಯಶಂಕರ ಕಲ್ಚಾರ್, ವಿಶ್ವನಾಥ ಜಾಕೆ, ರಾಮಚಂದ್ರ ಭಟ್ ಕಲ್ಚಾರ್, ಗಣೇಶ್ ಭಟ್ ಕಲ್ಚಾರ್, ದೇವಿಪ್ರಸಾದ್ ಪಂಜದಬೈಲು, ಪದ್ಮಯ್ಯ ಗೌಡ ಗೋಳಿಕಟ್ಟೆ, ಬಾಲಕೃಷ್ಣ ಕರಿಕ್ಕಳ, ದಿನೇಶ್ ಕರಿಕ್ಕಳ, ಗಣೇಶ್ ಕರಿಕ್ಕಳ, ಪದ್ಮನಾಭ ಕರಿಕ್ಕಳ, ಪುರಂದರ ಕರಿಕ್ಕಳ, ಲವಕುಮಾರ್ ಮಡಪ್ಪಾಡಿ, ಜಿತೇಂದ್ರ ಗೋಳಿಕಟ್ಟೆ, ರಜಿತ್ ಭಟ್, ಗುತ್ತಿಗೆದಾರ ಜಲೀಲ್ ಬೈತಡ್ಕ, ನಿರ್ಮಿತಿ ಕೇಂದ್ರ ಇಂಜಿನಿಯರ್ ಹರೀಶ್, ಶಾರದಾ ರಾಧಾಕೃಷ್ಣ, ಶ್ರೀಮತಿ ದಮಯಂತಿ, ರಾಜೇಶ್ವರಿ, ರತ್ನಾವತಿ ನಡುಗುಡ್ಡೆ, ಶಾಂತಾ ಮಡಪ್ಪಾಡಿ, ಅಶ್ವತ್ ಬಾಬ್ಲುಬೆಟ್ಟು, ಮೇದಪ್ಪ ಗೌಡ ಪಂಜದಬೈಲು, ಪರಮೇಶ್ವರ ಗೌಡ ಬಾಬ್ಲುಬೆಟ್ಟು, ಸುದ್ದಿ ಏಜೆಂಟ್ ಗೋಪಾಲ ಗೌಡ ಬರ್ಲಾಯಬೆಟ್ಟು, ಜಯರಾಮ ಜಾಕೆ, ರಾಧಾಕೃಷ್ಣ ಪಂಬೆತ್ತಾಡಿ, ದೇವಪ್ಪ ಗೌಡ ಮಡಪ್ಪಾಡಿ, ಚಂದ್ರಾವತಿ ಮಂಚಿಕಟ್ಟೆ ಸೇರಿದಂತೆ ಪಂಬೆತ್ತಾಡಿ, ಕಲ್ಮಡ್ಕ ಗ್ರಾಮಸ್ಥರು, ರಸ್ತೆ ಫಲಾನುಭವಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಭಿವೃದ್ಧಿ ಕಾಮಗಾರಿ ಮಾ. 5ರಂದೇ ಪ್ರಾರಂಭಗೊಂಡಿದೆ.