ಬೆಳ್ಳಾರೆ ಪೊಲೀಸ್ ಠಾಣೆಯ ನೇತ್ರಕುಮಾರ್ ಎ.ಎಸ್.ಐ.ಆಗಿ ಭಡ್ತಿ – ಪುತ್ತೂರಿಗೆ ವರ್ಗಾವಣೆ

0

ಹೆಡ್ ಕಾನ್ಸ್ ಟೇಬಲ್ ಭವಿತ್ ಸುಳ್ಯ ಠಾಣೆಗೆ ವರ್ಗಾವಣೆ – ಸನ್ಮಾನ – ಬೀಳ್ಕೊಡುಗೆ

ನಿಷ್ಠೆ ,ಹುಮ್ಮಸ್ಸಿನಿಂದ ಕೆಲಸ ಮಾಡಿದಾಗ ಯಶಸ್ಸು – ತಿಮ್ಮಪ್ಪ ನಾಯ್ಕ್

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ನೇತ್ರಕುಮಾರ್ ಪರಮಲೆಯರು ಎ.ಎಸ್.ಐ ಭಡ್ತಿಗೊಂಡಿದ್ದು ಪುತ್ತೂರು ನಗರ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.


ಹೆಡ್ ಕಾನ್ಸ್ ಟೇಬಲ್ ಭವಿತ್ ಮಾಡಾವು ರವರು ಸುಳ್ಯ ಠಾಣೆಗೆ ವರ್ಗಾವಣೆಗೊಂಡಿದ್ದು ಇವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮಾ.05 ರಂದು ನಡೆಯಿತು.


ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್ ಹಾಗೂ ಬೆಳ್ಳಾರೆ ಠಾಣೆಯ ಎಸ್.ಐ.ಈರಯ್ಯ ಡಿ.ಎನ್.ರವರು ನೇತ್ರಕುಮಾರ್ ಹಾಗೂ ಭವಿತ್ ರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಟ್ಟರು.


ಸನ್ಮಾನ ಸ್ವೀಕರಿಸಿದ ನೇತ್ರಕುಮಾರ್ ಹಾಗೂ ಭವಿತ್ ರವರು ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪೊಲೀಸರು ಶುಭಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎ.ಎಸ್.ಐ.ಗಳಾದ ರವೀಂದ್ರ, ದಾಮೋದರ್ , ನೇತ್ರಕುಮಾರ್ ರವರ ಪತ್ನಿ ಶ್ರೀಮತಿ ದೇವಿಕೃಪಾ,ಪುತ್ರ ಯಶ್ವಿತ್ ಪಿ.ಎನ್, ಹಾಗೂ ಪೊಲೀಸರು,ಗೃಹರಕ್ಷಕ ದಳದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾನ್ಸ್ ಟೇಬಲ್ ಪೂಜಾರವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.