ನಾಗಪಟ್ಟಣ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವಕ್ಕೆ ಗೊನೆ ಮುಹೂರ್ತ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ
ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪ್ರಯುಕ್ತ ದೇವತಾ ಪ್ರಾರ್ಥನೆಯಾಗಿ ಗೊನೆ ಮುಹೂರ್ತವು ಮಾ.5 ರಂದು ನೆರವೇರಿತು.

ಅರ್ಚಕ ಶಿವಪ್ರಸಾದ್ ರವರು ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ
ಅಧ್ಯಕ್ಷ ದಿನೇಶ್ ಕೋಲ್ಚಾರ್, ಸದಸ್ಯರಾದ ಸುಧಾಮ ಅಲೆಟ್ಟಿ, ಬಾಬುಗೌಡ ಕಡೆಂಗ, ತಂಗವೇಲು ,ಭಜನಾ ಸಂಘದ ಅಧ್ಯಕ್ಷ ಹೂವಾನಂದ ಪಾತಿಕಲ್ಲು, ಪರಿವಾರ ಆನಂದ ಗೌಡ, ಶರತ್,ಜಿನ್ನಪ್ಪಮತ್ತಿತರರು ಉಪಸ್ಥಿತರಿದ್ದರು.