ಕಲ್ಮಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ‘ಅಮೃತಧೇನು’ ಇದರ ಉದ್ಘಾಟನೆ ಮಾ.7 ರಂದು ನಡೆಯಲಿದೆ.
ಬೆಳಿಗ್ಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ದ.ಕ ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರ ದ ಶಾಸಕಿ ಕು। ಭಾಗೀರಥಿ ಮುರುಳ್ಯ ಉದ್ಘಾಟಲಿದ್ದಾರೆ.
ಸಭಾಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರಿ ಸಂಘ, ಕಲ್ಮಕಾರು ಇದರ ಅಧ್ಯಕ್ಷ ಗಣೇಶ್ ಕೆ.ಎಸ್ ವಹಿಸಿದ್ದಾರೆ.
ಕೆ.ಎಂ.ಎಫ್.ನ ನಿರ್ದೇಶಕರು, ಅಧಿಕಾರಿಗಳು ಹಾಗೂ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಥಳ ದಾನಿಗಳಿಗೆ, ಮಾಜಿ ಅಧ್ಯಕ್ಷರಿಗೆ, ಹೆಚ್ಚು ಹಾಲು ಪೂರೈಸುವವರಿಗೆ, ಕಟ್ಟಡ ಕಾಮಗಾರಿ ನಿರ್ವಹಿಸಿದವರಿಗೆ, ಸಿಬ್ಬಂದಿಗಳು ಸನ್ಮಾನ ನಡೆಯಲಿದೆ.
2006 ರಲ್ಲಿ ಸತೀಶ್ ಕೊಪ್ಪಡ್ಕ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಕಲ್ಮಕಾರು ಹಾಲು ಉತ್ಪಾದಕ ಸಂಘ ಇಷ್ಟರವರೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತಿತ್ತು. ಪ್ರಸ್ತುತ ದಿ.l ವೆಂಕಪ್ಪ ಅವರ ಸ್ಮರಣಾರ್ಥ ಶ್ರೀಮತಿ ಎನ್.ವಿ ಜಾನಕಿ ಮತ್ತು ಮಕ್ಕಳು ದಾನವಾಗಿ ನೀಡಿದ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ದಿನಂಪ್ರತಿ 520- 530 ಲೀಟರ್ ವರೆಗೆ ಹಾಲು ಪೂರೈಸುತಿದ್ದು ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಪೂರೈಸುವ ಸಂಸ್ಥೆಯ ಲ್ಲೊಲೊಂದು ಇದಾಗಿದೆ.