ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ನಿವಾಸಿ ರಾಮಣ್ಣ ನಾಯ್ಕ ಎಂಬವರು ಹೃದಯಾಘಾತದಿಂದ ಇಂದು ನಿಧನರಾದರು.ಅವರಿಗೆ ಸುಮಾರು 60ವರ್ಷ ವಯಸ್ಸಾಗಿತ್ತು.
ಇಂದು ಸುಳ್ಯ ಪೇಟೆಗೆ ಬಂದಿದ್ದ ಅವರು ಮಧ್ಯಾಹ್ನ ಮನೆಗೆ ಬಂದು ನೀರು ಕುಡಿದು ಮಲಗಿದವರು ಅಲ್ಲೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮೃತರು ಪತ್ನಿಯರಾದ ಗೀತಾ, ಜಯಲತ
ಮಕ್ಕಳಾದ ಯಶ್ಮಿತಾ, ಅಕ್ಷತಾ, ಯಶಸ್ವಿನಿ,
ಸಹೋದರರು, ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.