ಒಂದು ವರ್ಷದ ಅವಧಿಗೆ ಆಡಳಿತ ಮೊಕ್ತೇಸರರಾಗಿ ಉಮೇಶ್ ರಾವ್ ಕೊಂಡೆಪ್ಪಾಡಿ ನೇಮಕ
ಮುಂದಿನ ವರ್ಷದ ಜಾತ್ರೆಯ ಬಳಿಕ ಸಮಿತಿ ಪುನರ್ ರಚನೆ : ಹೊಸದಾಗಿ ಮೊಕ್ತೇಸರರುಗಳ ಆಯ್ಕೆ : ಸಭೆ ನಿರ್ಣಯ
ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮುಂದಿನ ವರ್ಷದ ಜಾತ್ರೆಯ ತನಕ ನೂತನ ಅಧ್ಯಕ್ಷರಾಗಿ ಉಮೇಶ್ ರಾವ್ ಕೊಂಡೆಪ್ಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರಾ ಖರ್ಚು ವೆಚ್ಚ ಮಂಡನೆ ಹಾಗೂ ಆಡಳಿತ ಮೊಕ್ತೇಸರ ಆಯ್ಕೆ ಕುರಿತಂತೆ ಭಕ್ತರ ಸಭೆಯು ನಿರ್ಗಮನ ಅಧ್ಯಕ್ಷ ಬಾಲಚಂದ್ರ ರಾವ್ ಕೊಂಡೆಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಮಚಂದ್ರ ಕೋಡಿಬೈಲು ಅವರು ಲೆಕ್ಕಚಾರ ಮಂಡಿಸಿದರು.
ಮುಂದಿನ ವರ್ಷದ ಜಾತ್ರೆಯ
ಬಳಿಕ ಹೊಸ ಸಮಿತಿ
ಅನೇಕ ವರ್ಷಗಳಿಂದ ಸಮಿತಿ ಪುನರ್ ರಚನೆಯಾಗದ ಕಾರಣ ದೇವಾಲಯದ ಆಡಳಿತ ಮಂಡಳಿಗೆ ಹೊಸ ಸಮಿತಿ ರಚಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಭಕ್ತರಿಂದ ಕೇಳಿ ಬಂತು. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಜಾತ್ರೆಯ ತನಕ ಹಾಲಿ ಸಮಿತಿಯನ್ನು ಮುಂದುವರಿಸಿ, ಆ ಬಳಿಕ ಹಳೆ ಸಮಿತಿಯನ್ನು ವಿರ್ಸಜಿಸಿ ನೂತನ ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯ ದಾಖಲಿಸಲಾಯಿತು. ಜಾತ್ರೆಯ ನಂತರದ ಲೆಕ್ಕಚಾರ ಮಂಡನೆ ಸಭೆಯಲ್ಲಿ ನೂತನ ಮೊಕ್ತೇಸಸರನ್ನು ಆಯ್ಕೆ ಮಾಡಿ ಅನಂತರ ಆಡಳಿತ ಮೊಕ್ತೇಸರನ್ನು ಆರಿಸುವುದು, ಪ್ರತಿ ಮೂರು ವರ್ಷಕ್ಕೊಮ್ಮೆ ಆಡಳಿತ ಮಂಡಳಿ ಪುನಾರಚನೆ ಆಗಬೇಕು ಅನ್ನುವ ಅಭಿಪ್ರಾಯವನ್ನು ಸಭೆ ವ್ಯಕ್ತಪಡಿಸಿತು. ಇದರಂತೆ ಮುಂದುವರಿಯಲು ಸಭೆ ತೀರ್ಮಾನಿಸಿತು.
ಊರ ಪ್ರಮುಖರಾದ ಉಮೇಶ್ ಕೆಎಂಬಿ ವಿಷಯ ಪ್ರಸ್ತಾವಿಸಿ, ದೇವಾಲಯಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳಲ್ಲಿ ಆಡಳಿತ ಮಂಡಳಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು, ಮೇಲಿನ ಮುಕ್ಕೂರು ತರವಾಡು ಮನೆಯಲ್ಲಿ ದೈವ ಸಾನಿಧ್ಯದ ಬಗ್ಗೆ ನಡೆದ ಅಷ್ಟಮಂಗಲ ಪ್ರಶ್ನಾಚಿಂತನೆಯಂತೆ ಪೆರುವೋಡಿಯಲ್ಲಿಯು ಪ್ರಶ್ನಾ ಚಿಂತನೆ ನಡೆಯಬೇಕಿದೆ. ಇದಕ್ಕೆ ತಕ್ಷಣ ಸ್ಪಂದನೆ ನೀಡಬೇಕು ಎಂದರು. ಈ ಕುರಿತು ಭಕ್ತಾಧಿಗಳ ಸಭೆ ಕರೆದು ಅಭಿಪ್ರಾಯ ಆಲಿಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ಸುರೇಶ್ ಉಪಾಧ್ಯಾಯ, ಜಾತ್ರಾ ಸಮಿತಿ ಅಧ್ಯಕ್ಷ ದಯಾನಂದ ಗೌಡ ಕಾನಾವುಜಾಲು, ಮೊಕ್ತೇಸರರಾದ ಕುಂಬ್ರ ದಯಾಕರ ಆಳ್ವ, ವಸಂತ ಬೈಪಡಿತ್ತಾಯ, ಡಾ.ನರಸಿಂಹ ಶರ್ಮಾ, ಸುಜಾತ ವಿ ರಾಜ್, ಪುಷ್ಪಾವತಿ ಕಂಡಿಪ್ಪಾಡಿ, ಕೃಷ್ಣಪ್ಪ ನಾಯ್ಜ ದೇವಿಮೂಲೆ, ಕುಶಾಲಪ್ಪ ಪೆರುವಾಜೆ, ಸುದೀರ್ ಕೊಂಡೆಪ್ಪಾಡಿ, ಪದ್ಮನಾಭ ಗೌಡ ಕಾನಾವು, ನಾರಾಯಣ ಕೊಂಡೆಪ್ಪಾಡಿ, ಸಂಜೀವ ಗೌಡ ಬೈಲಂಗಡಿ, ವಿಜಯ ಕುಮಾರ್ ರೈ ಪೆರುವೋಡಿ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಗುಡ್ಡಪ್ಪ ಗೌಡ ಅಡ್ಯತಕಂಡ, ಯಶವಂತ ಜಾಲು, ಜಯಂತ ಗೌಡ ಕುಂಡಡ್ಕ, ಕೃಷ್ಣಪ್ಪ ಜರಿಯಡ್ಕ, ರಘುನಾಥ ಶೆಟ್ಟಿ ಬರಮೇಲು, ಸುಬ್ರಹ್ಮಣ್ಯ ಗೌಡ ಒರುಂಕು ಮೊದಲಾದವರು ಉಪಸ್ಥಿತರಿದ್ದರು.