ಕೊಡಿಯಾಲ ಕೆ.ಕೆ. ನಾಯ್ಕರ ಮನೆಯಲ್ಲಿ ಸತ್ಸಂಗ

0

ಋಷಿಯೋಗ ಇಂಟರ್ ನ್ಯಾಶನಲ್ ಫೌಂಡೇಷನ್‌ ಬೆಂಗಳೂರು ಇದರ ಆಶ್ರಯದಲ್ಲಿ ಸತ್ಸಂಗ ಕಾರ್ಯಕ್ರಮ ಮಾ. 14ರಂದು ಕೊಡಿಯಾಲದ ಕೆ.ಕೆ. ನಾಯ್ಕರ ಮನೆಯಲ್ಲಿ ನಡೆಯಿತು.


ಫೌಂಡೇಶನ್ ನ ಮುಖ್ಯಸ್ಥರಾದ ಮೋಹನ್ ರೆಡ್ಡಿ ಗುರೂಜಿ ಮತ್ತು ಮಲ್ಲಿಕಾರ್ಜುನ ಗುರೂಜಿ ಜೀವನದಲ್ಲಿ ಆರೋಗ್ಯವಾಗಿ, ಆನಂದವಾಗಿರಬೇಕಾದರೆ ನಾವು ಹೇಗಿರಬೇಕೆಂಬುದರ ಬಗ್ಗೆ ಆಶೀರ್ವನ ನೀಡಿದರು. ಮನೆಯವರಾದ ಕೆ.ಕೆ. ನಾಯ್ಕ್ ಮತ್ತು ಪುಟ್ಟಣ್ಣ ನಾಯ್ಕ್ ದಂಪತಿಗಳು ಗುರೂಜಿಯವರ ಆಶೀರ್ವಾದ ಪಡೆದುಕೊಂಡರು. ಈಶ್ವರ ವಾರಣಾಶಿ ಸ್ವಾಗತಿಸಿ, ವಂದಿಸಿದರು. ಸತ್ಸಂಗದ ಬೆಳ್ಳಾರೆ ವಲಯದ ಪ್ರಮುಖರಾದ ಕಾಮಧೇನು ಮಾಧವ ಗೌಡ, ಸಾಯಿ ಪ್ರಸಾದ್ ನೆಟ್ಟಾರು ಸೇರಿದಂತೆ ಇತರ ಪದಾಧಿಕಾರಿಗಳು, ಸದಸ್ಯರು, ಕೆ.ಕೆ. ನಾಯ್ಕರ ಕುಟುಂಬಸ್ಥರು, ಬಂಧು, ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.