ಇಂದಿನಿಂದ ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ

0

ಅದ್ದೂರಿ ಹಸಿರುವಾಣಿ ಮೆರವಣಿಗೆಗೆ ಮಂದಿರದ ಬಳಿ ಪೂರ್ವ ಸಿದ್ಧತೆ

ಆಲೆಟ್ಟಿ ಗ್ರಾಮ ವ್ಯಾಪ್ತಿಯ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ದೈವಗಳ ದೈವಂಕಟ್ಟು ಮಹೋತ್ಸವ ಇಂದಿನಿಂದ ಆರಂಭಗೊಳ್ಳಲಿದ್ದು,
ಪೂರ್ವಾಹ್ನ ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಬಳಿಯಿಂದ ಅದ್ದೂರಿ ಹಸಿರುವಾಣಿ ಮೆರವಣಿಗೆಗೆ ಪೂರ್ವ ಸಿದ್ಧತೆ ನಡೆಯುತ್ತಿದೆ.
ತಾಲೂಕಿನ ಹಲವು ಕಡೆಗಳಿಂದ ಹಸಿರುವಾಣಿಯು ವಾಹನಗಳಲ್ಲಿ ಬಂದು ಜಮಾಯಿಸುತ್ತಿದೆ.

ದೈವಸ್ಥಾನದ ತನಕ ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಚೆಂಡೆ ವಾದ್ಯ ಘೋಷದೊಂದಿಗೆ ಸಾಗಲಿದೆ. ನಂತರ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರ ನೇತೃತ್ವದಲ್ಲಿ ಕಲವರ ನಿರಕ್ಕಲ್ ಕಾರ್ಯಕ್ರಮ ನಡೆಯಲಿದೆ.