ಸೂಡಾ ಪ್ರಾಧಿಕಾರ ಅಧ್ಯಕ್ಷರಿಗೆ ಹರ್ಲಡ್ಕ ವಿಲ್ಲಾದಲ್ಲಿ ಸನ್ಮಾನ ಹಾಗೂ ಇಪ್ತಾರ್ ಕೂಟ

0

ಸುಳ್ಯ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಹಾಜಿ ಮುಸ್ತಫಾರವರಿಗೆ ಸನ್ಮಾನ ಮತ್ತು ಇಪ್ತಾರ್ ಕೂಟ ಕಾರ್ಯಕ್ರಮ ಮಾ.15 ರಂದು ಹರ್ಲಡ್ಕ ವಿಲ್ಲಾದಲ್ಲಿ ನಡೆಯಿತು.
ಹರ್ಲಡ್ಕ ವಿಲ್ಲಾದ ಲತೀಫ್ ಹರ್ಲಡ್ಕ ಮತ್ತು ಮನೆಯವರು ಸೂಡಾ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.


ಅನ್ಸಾರಿಯಾ ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ ದುವಾಶಿರ್ವಚನ ಮಾಡಿದರು.
ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್ ಅಭಿನಂದನಾ ಬಾಷಣಮಾಡಿದರು.
ಈ ಸಂದರ್ಭದಲ್ಲಿ ನ.ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಹಮೀದ್ ಹೊಸ್ಮಠ,ಹನೀಫ್ ದೇಲಂಪಾಡಿ,ಇಬ್ರಾಹಿಂ ತೆಕ್ಕಿಲ್ ಗೂನಡ್ಕ,ಪರ್ವೇಜ್ ಅಹಮದ್ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.