ಅಯ್ಯನಕಟ್ಟೆಯ ನಮ್ಮಆರೋಗ್ಯಧಾಮದಲ್ಲಿ ಮಾ. 23ರಂದು ಬೆಳಿಗ್ಗೆ 10.30 ಮಧ್ಯಾಹ್ನ ತನಕ ಉಚಿತ ಬಾಯಿ ಮತ್ತು ದಂತ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಹಲ್ಲಿನ ಸಮಸ್ಯೆ, ಮುಖ ಮತ್ತು ದವಡೆಯ ನೋವು, ಬಾಯಿ ತೆರೆಯುವಿಕೆಯ ಸಮಸ್ಯೆ, ಬಾಯಿ ಹುಣ್ಣು, ಬಾಯಿ ಉರಿ, ಒಣ ಬಾಯಿ, ಬಾಯಿಯ ಕ್ಯಾನ್ಸರ್, ತಂಬಾಕು ನಿಯಂತ್ರಣ ಮತ್ತು ಸಮಾಲೋಚನೆ ನಡೆಯಲಿದೆ. ಶಿಬಿರವನ್ನು ಬಾಯಿ ಮತ್ತು ಮುಖದ ತಜ್ಞೆ ಮತ್ತು ರೇಡಿಯೋಲಜಿಸ್ಟ್ ಡಾ. ಶಮಾ ಮಜಲುಕರೆ ನಡೆಸಿಕೊಡಲಿದ್ದಾರೆ.

