ಕಲ್ಲುಗುಂಡಿ : ಆನೆ ದಾಳಿ

0

ಕಲ್ಲುಗುಂಡಿ ಕಡೆಪಾಲ ನಿವಾಸಿ ಧರ್ಮತೇಜ ನೂಜಾಲುರವರ ಹರಿಯಾಲಿ ಫಾರ್ಮ್ಸ್ ತೋಟಕ್ಕೆ ಕಾಡಾನೆ ದಾಳಿ ನಡೆಸಿದ ಘಟನೆ ಮಾ. 20 ರಂದು ರಾತ್ರಿ ನಡೆದಿದೆ.

ರಕ್ಷಣಾ ಬೇಲಿ,ಅಡಿಕೆ ಮರ, ತೆಂಗಿನ ಮರ ಹಲಸಿನ ಫಲ ಹಾನಿಯಾಗಿದ್ದು, ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ನಿಗದಿತ ಶಾಶ್ವತ ಪರಿಹಾರ ಮತ್ತು ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ರೈತರಿಗೆ ಅನುಕೂಲ ಆಗುವಂತೆ ಶಾಶ್ವತ ರಕ್ಷಣಾ ಪರಿಹಾರ ನಿರ್ಮಾಣವಾಗಬೇಕೆಂದು ಧರ್ಮತೇಜ ನೂಜಾಲು ರವರು ಆಗ್ರಹಿಸಿದ್ದಾರೆ.