ಸುಳ್ಯಸರಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ವಿಭಾಗ, ನೇಷನಲ್ ಇಂಟಿಗ್ರೇಟೆಡ್ ಫಾರಮ್ ಆಫ್ ಆರ್ಟಿಸ್ಟ್ಸ್ ಆಂಡ್ ಆಕ್ಟಿವಿಸ್ಟ್ಸ್ ಕರ್ನಾಟಕ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲಯನ್ಸ್ ಕ್ಲಬ್ ಹಿರಿಯಡ್ಕ ಇದರ ಜಂಟಿ ಆಶ್ರಯದಲ್ಲಿ ಸಂವೇದನಾ-2 ಶೀರ್ಷಿಕೆಯಡಿ ರಕ್ತದಾನ ಶಿಬಿರವು ಕಾಲೇಜಿನ ಸಭಾಂಗಣದಲ್ಲಿ ಮಾ.22 ರಂದು ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ. ಆರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯಡ್ಕ
ಲಯನ್ಸ್ ಕ್ಲಬ್ ಕ್ಯಾಬಿನೆಟ್ ಸದಸ್ಯ ಲಯನ್ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.




ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ವಸಂತ ಶೆಟ್ಟಿ, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳಾ ಟಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ನಿರ್ದೇಶಕ ಪ್ರವೀಣ್ ಕುಮಾರ್, ಐ.ಕ್ಯೂ.ಎ.ಸಿ ವಿಭಾಗದ ಸಂಚಾಲಕಿ ಡಾ. ಪ್ರೀತಿ ಕೆ. ರಾವ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯಶಂಕರ ಹೆಚ್, ರೋವರ್ ರೇಂಜರ್ ವಿಭಾಗದ ಸಂಚಾಲಕ ಶಿವಾನಂದ ಜಿ, ಎನ್.ಎಸ್.ಎಸ್ ಘಟಕಾಧಿಕಾರಿ ರಾಮಕೃಷ್ಣ ಕೆ, ಎನ್.ಎಸ್.ಎಸ್ ನಾಯಕ ಹಿತೇಶ್ ಕೆ.ಡಿ, ರೆಡ್ ಕ್ರಾಸ್ ನಾಯಕಿ ಲೀಲಾವತಿ, ರೋವರ್ ರೇಂಜರ್ ನಾಯಕರುಗಳಾದ ಗೌತಮ್ ಎಂ. ಬಿ, ರಮ್ಯ ಪಿ.ಎಂ ಉಪಸ್ಥಿತರಿದ್ದರು. ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.ಒಟ್ಟು 83 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳಾ ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯಶಂಕರ ಹೆಚ್ ಸ್ವಾಗತಿಸಿದರು, ಶಿವಾನಂದ ಜಿ ವಂದಿಸಿದರು,ರಾಮಕೃಷ್ಣ ಕೆ ಕಾರ್ಯಕ್ರಮ ನಿರೂಪಿಸಿದರು.