ಕಾಯರ್ತೋಡಿ ಶ್ರೀ ನಿಧಿ ಮಹಿಳಾ ಮಂಡಳದ ನೂತನ ಪದಾಧಿಕಾರಿಗಳ ಆಯ್ಕೆ

0

ಕಾಯರ್ತೋಡಿ ಶ್ರೀ ನಿಧಿ ಮಹಿಳಾ ಮಂಡಳದ ಮಹಾಸಭೆ ಮಾ.16 ರಂದು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕಲಾವತಿ ತೀರ್ಥರಾಮರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ, 2025-2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಧ್ಯಕ್ಷರಾಗಿ ಶ್ರೀಮತಿ ಕಲಾವತಿ ತೀರ್ಥರಾಮ, ಅಧ್ಯಕ್ಷರಾಗಿ ಶ್ರೀಮತಿ ಪ್ರಿಯಾ ಬಳ್ಳಡ್ಕ, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರುತಿ ಮಂಜುನಾಥ್, ಕೋಶಾಧಿಕಾರಿಯಾಗಿ ಜಯಮಾಲಾ ಶಿವಪ್ರಕಾಶ್, ಉಪಾಧ್ಯಕ್ಷರಾಗಿ ರಶ್ಮಿ ಉಪೇಂದ್ರ, ಜೊತೆ ಕಾರ್ಯದರ್ಶಿಯಾಗಿ ರತ್ನ ವೆಂಕಟೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಜ್ಯೋತಿ ಹರೀಶ್ ಆಯ್ಕೆಯಾದರು. ಶ್ರೀಮತಿ ಕಲಾವತಿ ತೀರ್ಥರಾಮರು ಸ್ವಾಗತಿಸಿ ಜ್ಯೋತಿ ಹರೀಶ್ ರವರು ವಂದಿಸಿದರು.