ಸುಬ್ರಹ್ಮಣ್ಯ: ಕೆ.ಎಸ್.ಎಸ್.ಕಾಲೇಜಿನಲ್ಲಿ ಅಂತರ್ ಕಾಲೇಜು ಆರ್ಟ್ಸ್ ಫೆಸ್ಟ್

0

ಅಕ್ಷಯಾ ಕಾಲೇಜು ಪುತ್ತೂರು ಸಮಗ್ರ ಪ್ರಶಸ್ತಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ದ್ವಿತೀಯ

ಕರಾವಳಿ ಪ್ರದೇಶದ ಶುದ್ಧ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದ್ದು,ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಪೀಳಿಗೆ ತೊಡಗಿಸುವಂತಾಗಲು ಇಂತಹ ಕಾರ್ಯಕ್ರಮಗಳು ಉತ್ತೇಜನಕಾರಿಯಾಗಿದೆ ಎಂದು
ಧ್ವನಿ ಫೌಂಡೇಶನ್ ಮೈಸೂರು ಇದರ ಸ್ಥಾಪಕರಾದ ಡಾ. ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.

ಅವರು
.ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಮಾನವಿಕ ಸಂಘದ ಸಹಯೋಗದಲ್ಲಿ ತೃತೀಯ ಕಲಾ ಪದವಿಯ ಆಯೋಜನೆಯಲ್ಲಿ ಮಂಗಳೂರು ವಿ.ವಿ ಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮಾ.24 ರಂದು ಡ್ರೀಮ್ಸ್2ಕೆ25 ಆರ್ಟ್ಸ್ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ವಿ.ಜೆ ವಿಖ್ಯಾತ್ ಯೂ ಟ್ಯೂಬ್ ಚಾನಲ್ ನ ವಿ.ಜೆ.ವಿಖ್ಯಾತ್ ಅವರಿದ್ದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಡಾ.ರವಿಕಕ್ಕೆಪದವು, ಸುಬ್ರಹ್ಮಣ್ಯ ದೇವಳದ ಬ್ರಹ್ಮರಥ ಕಟ್ಟುವ ಮಲೆಕುಡಿಯ ಜನಾಂಗದ ಹಿರಿಯರಾದ ತನಿಯಪ್ಪ ಮುಂಡೊಕಜೆ ,ಮಂಗಳೂರು ವಿ.ವಿ ಯ ಸಮಾಜಕಾರ್ಯ ವಿಷಯದ ಸ್ನಾತಕೋತ್ತರ
ಪದವಿಯಲ್ಲಿ 3ನೇ ರಾಂಕ್ ಪಡೆದಿರುವ ಕೆ.ಎಸ್.ಎಸ್.ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ಕು.ಅರ್ಪಿತಾ ಮತ್ತು ಭಾರತೀಯ ರಕ್ಷಣಾ ಸೇನೆಗೆ ಆಯ್ಕೆಯಾಗಿ ಸೇವೆಸಲ್ಲಿಸುತ್ತಿರುವ ಪೂರ್ವ ವಿದ್ಯಾರ್ಥಿಯಾದ ರಂಜಿತ್ ಇವರುಗಳನ್ನು ಡ್ರೀಮ್ಸ್2ಕೆ25 ಆರ್ಟ್ಸ್ ಫೆಸ್ಟ್ ನ ಅಂಗವಾಗಿ ಸನ್ಮಾನಿಸಲಾಯಿತು.


ಕಾಲೇಜಿನ ಪ್ರಾಚಾರ್ಯರಾದ ಡಾ.ದಿನೇಶ.ಪಿ.ಟಿ.ಅಧ್ಯಕ್ಷತೆಯನ್ನು ವಹಿಸಿದ್ದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಶ್ರೀಮತಿ ಲತಾ.ಬಿ.ಟಿ ವೇದಿಕೆಯಲ್ಲಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಉದಯಕುಮಾರ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.
ರಾಜ್ಯಶಾಸ್ತ್ರವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸ್ವಾತಿ ವಂದನಾರ್ಪಣೆಗೈದರು. ಕು.ಅನ್ವಿತಾ ತೃತೀಯ ಬಿ.ಎ. ಪ್ರಾರ್ಥಿಸಿದರು. ಕು.ಕಲ್ಪನಾ ತೃತೀಯ ಬಿ.ಎ.ಕಾರ್ಯಕ್ರಮ ನಿರೂಪಿಸಿದರು. ಆಂಗ್ಲಭಾಷಾ ವಿಭಾಗದ
ಮುಖ್ಯಸ್ಥರಾದ ಸ್ರಜನ್ ಮುಂಡೋಡಿ ಹಾಗೂ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಆರತಿ, ಆರ್ಟ್ಸ್ ಫೆಸ್ಟ್ ನ ವಿದ್ಯಾರ್ಥಿ ಸಂಯೋಜಕ ನಿತೀಶ್ ಕೆ.ಯು. ಉಪಸ್ಥಿತರಿದ್ದರು.

ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ.ದಿನೇಶ.ಪಿ.ಟಿ.ಅವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಮನಮೋಹನ.ಎಂ. ಮತ್ತು ಖ್ಯಾತ ಶಟರ ರ್ಬಾಕ್ಸ್ ಫಿಲಂಸ್ ನ ಸಚಿನ್ ಶೆಟ್ಟಿ ಪೆಸ್ಟ್ ನಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಿದರು. ಒಟ್ಟು 17 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು, 9 ರೀತಿಯ ಸ್ಪರ್ಧೆಗಳನ್ನು ನಡೆಸಲಾಗಿತ್ತು.

ಮಾನವಿಕ ಸಂಘದ ಸಹ ಸಂಯೋಜಕರಾದ ಸ್ರಜನ್ ಮುಂಡೋಡಿ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕರಾದ ಶ್ರೀಮತಿ ಆರತಿ ಸ್ವಾಗತಿಸಿ,ಕು.ದೀಕ್ಷಾ ತೃತೀಯ ಬಿ.ಎ. ಧನ್ಯವಾದಗೈದರು.ಕು.ಕಲ್ಪನಾ ಮತ್ತು ಕು.ಸಂಜ್ಞಾ ನಿರೂಪಿಸಿದರು.ಮಾನವಿಕ ಸಂಘದ ಸಂಯೋಜಕ ಶ್ರೀ.ಉದಯಕುಮಾರ್ , ತೃತೀಯ ಬಿ.ಎ.ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಸ್ವಾತಿ ಮತ್ತು ಡ್ರೀಮ್ಸ್2ಕೆ25 ಆರ್ಟ್ಸ್ ಫೆಸ್ಟ್ ನ ವಿದ್ಯಾರ್ಥಿ ಸಂಯೋಜಕ ನಿತೀಶ್ ಕೆ.ಯು. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಡ್ರೀಮ್ಸ್ 2ಕೆ25 ಆರ್ಟ್ಸ್ ಫೆಸ್ಟ್ ಗೆ ಸಹಕರಿಸಿದ ಮಹನೀಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಫಲಿತಾಂಶ
ಅಕ್ಷಯಾ ಕಾಲೇಜು ಪುತ್ತೂರು ಸಮಗ್ರ ಪ್ರಶಸ್ತಿಯನ್ನು ಪಡೆಯಿತು.ಸರಕಾರಿ ಪ್ರಥಮದರ್ಜೆ ಕಾಲೇಜು ಸುಳ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.