ಕಳಂಜ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ನೂತನ ಭೋಜನ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 3 ಲಕ್ಷ ಅನುದಾನದ ಚೆಕ್ ವಿತರಣೆಯು ಮಾ.28 ರಂದು ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಸುಳ್ಯ ಇದರ ಯೋಜನಾಧಿಕಾರಿಗಳಾದ ಮಾಧವ, ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಕಳಂಜ ಇದರ ಅಧ್ಯಕ್ಷರಾದ ಕರುಣಾಕರ ಶೆಟ್ಟಿ, ಖಜಾಂಜಿ ರಾಜೇಶ್ ಪಟ್ಟೆ, ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಎನ್ ವಿಶ್ವನಾಥ ರೈ, ರುಕ್ಮಯ್ಯ ಗೌಡ ಕಟ್ಟತ್ತಾರು, ಬೆಳ್ಳಾರೆ ವಲಯದ ಅಧ್ಯಕ್ಷರಾದ ಶ್ರೀಮತಿ ವೇದಾ ಶೆಟ್ಟಿ, ಎಸ್ ಕೆ ಡಿ ಆರ್ ಡಿ ಪಿ ವಲಯ ಮೇಲ್ವಿಚಾರಕಿ ಶ್ರೀಮತಿ ವಿಶಾಲ, ಎಸ್ ಕೆ ಡಿ ಆರ್ ಡಿ ಪಿ ಸೇವಾ ಪ್ರತಿನಿಧಿ ಶ್ರೀಮತಿ ಅಶ್ವಿನಿ, ಎಸ್ ಕೆ ಡಿ ಆರ್ ಡಿ ಪಿ ವಿ ಎಲ್ ಇ ಶ್ರೀಮತಿ ಶ್ವೇತಾ ವಿಜಯ್, ಅಮರಪಡ್ನೂರು ಕಾರ್ಯಕ್ಷೇತ್ರದ ಶ್ರಿಮತಿ ದಿವ್ಯ, ಸುವಿದ ಸಹಾಯಕಿ ಶ್ರಿಮತಿ ನೇತ್ರವತಿ ಎಸ್ ಕೆ ಡಿ ಆರ್ ಡಿ ಪಿ ಕಳಂಜ ಒಕ್ಕೂಟದ ಪಧಾಧಿಕಾರಿಗಳು ಹಾಗೂ ಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.


