ಮೊಗರ್ಪಣೆ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಫಿತರ್ ಹಬ್ಬ ಆಚರಣೆ

0

ಯಾರನ್ನೂ ನೋಹಿಸದ ಪರಸ್ಪರ ಪ್ರೀತಿ ವಿಶ್ವಾಸದ ಜೀವನ ನಮ್ಮಿಂದ ಆಗಬೇಕು: ಹಾಫಿಲ್ ಶೌಖತ್ ಅಲಿ ಸಖಾಫಿ ರವರಿಂದ ಈದ್ ಸಂದೇಶ

ನಾವೆಲ್ಲರೂ ಪವಿತ್ರ ಇಸ್ಲಾಂ ಧರ್ಮವನ್ನು ಪಾಲಿಸುವವರಾಗಿದ್ದು ನಮ್ಮ ಪೈಗಂಬರ್ ಮುಹಮ್ಮದ್ ಸ. ಅ ರವರು ತೋರಿಸಿ ಕೊಟ್ಟ ಸನ್ಮಾರ್ಗದಲ್ಲಿ ಜೀವಿಸಬೇಕಾಗಿದೆ.
ಯಾರಿಗೂ ನೋವು ನೀಡದೆ ಯಾರನ್ನು ದ್ವೇಷಿಸದೆ ಸಮಾಜದಲ್ಲಿ ಜಾತಿ ಮತ ಭೇದವನ್ನು ಮರೆತು ಪರಸ್ಪರ ಪ್ರೀತಿ ವಿಶ್ವಾಸದ ಜೀವನ ಮಾಡಬೇಕು ಎಂದು ಹಾಫಿಲ್ ಶೌಖತ್ ಅಲಿ ಸಖಾಫಿ ರವರು ಮೊಗರ್ಪಣೆ ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಮಾ 31 ರಂದು ಪವಿತ್ರ ರಂಜಾನ್ ಹಬ್ಬದ ಈದ್ ಫಿತರ್ ಆಚರಣೆಯಲ್ಲಿ ಈದ್ ಸಂದೇಶವನ್ನು ನೀಡಿದರು.

ಈ ಸಂಧರ್ಭದಲ್ಲಿ ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಜಮಾಅತಿನ ನೂರಾರು ಮಂದಿ ಮುಸಲ್ಮಾನ ಬಾಂಧವರು ಈದ್ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.