ಅರೆಭಾಷೆ, ಜನಪದ ಸೇರಿದಂತೆ ಶಾಸ್ತ್ರೀಯ, ಅರೆ ಶಾಸ್ತ್ರೀಯ ನೃತ್ಯ ವೈಭವ
ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಳ್ಯದ ರಂಗಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಸ್ತ್ರೀಯ , ಅರೆಶಾಸ್ತ್ರೀಯ, ಅರೆಭಾಷೆ ನೃತ್ಯದಲ್ಲಿ ರಂಜಿಸಿದ ವಿದ್ಯಾರ್ಥಿಗಳ ನೃತ್ಯ ನೋಡುಗರ ಕಣ್ಮನ ಸೆಳೆದವು.
ಕಾರ್ಯಕ್ರಮದಲ್ಲಿ ಸುಳ್ಯದ ವಿದ್ಯಾರ್ಥಿನಿಯರಾದ ಅಕ್ಷಿತಾ ನಿರ್ಪಾಡಿ, ಯಶಿಕಾ ಕೆದಂಬಾಡಿ, ಚೈತ್ರಾ ಅಡೂರು , ವಿಹನಿ ಜಾಕೆ, ಸೋನಾ ನಾರ್ಕೋಡು, ಹರಿಕಾ ಚುಕ್ರಡ್ಕ, ಯಜ್ಞ ಬಂಗಾರಕೋಡಿ ನೃತ್ಯಪ್ರದರ್ಶನ ನೀಡಿದರು.