ಎ.2ರಂದು ನಿಧನರಾದ ಸುಳ್ಯದ ಕೋಟೆಕ್ಕಲ್ ಆಯುರ್ವೇದ ಶಾಲೆಯ ದಿ.ಪಿ.ವಿ.ಕೆ.ಆರ್. ವೈದ್ಯರ್ ಇವರಿಗೆ ಶ್ರದ್ಧಾಂಜಲಿ ಸಭೆ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಎ.4ರಂದು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು.

ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈಯವರು ನುಡಿನಮನ ಸಲ್ಲಿಸಿ, “ಪಿ.ವಿ.ಕೆ.ಆರ್. ವೈದ್ಯರ್ ರವರು ವಾಲಿಬಾಲ್ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ದೊಡ್ಡದು. ಅದನ್ನು ನಾವು ನೆನಪಿಸಬೇಕಾದುದು ನಮ್ಮ ಕರ್ತವ್ಯ. ಸಮಾಜದ ಎಲ್ಲರೊಂದಿಗೆ ಸಾಮರಸ್ಯ ದಿಂದ ಬೆರೆತ ಕುಟುಂಬ ಅವರದ್ದು” ಎಂದು ಹೇಳಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ, ಎಸ್.ಸಿಕ್ಸ್ ಗೌರವಾಧ್ಯಕ್ಷ ಗೋಕುಲ್ ದಾಸ್ ಕೆ. ಮಾತನಾಡಿದರು.
ವಾಲಿಬಾಲ್ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷ ಎಸ್. ಸಂಶುದ್ದೀನ್, ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್,ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಮಾಧವ ಗೌಡ,
ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಕೆ.ವಿ.ಜಿ. ಸುಳ್ಯಹಬ್ಬ ಸಮಿತಿಯ ಜನಾರ್ಧನ ನಾಯ್ಕ್ ಕೇರ್ಪಳ, ವಾಲಿಬಾಲ್ ಅಸೋಷಿಯೇಶನ್ ತಾಲೂಕು ಕೋಶಾಧಿಕಾರಿ ಕೆ.ಬಿ. ಇಬ್ರಾಹಿಂ, ರಾಕೇಶ್ ಕುಂಟಿಕಾನ, ಸತೀಶ್ ಕೊಯಿಂಗಾಜೆ, ಶಿವರಾಮ ಏನೆಕಲ್, ಎ.ಸಿ.ವಸಂತ, ಬಾಲಗೋಪಾಲ ಸೇರ್ಕಜೆ, ಹರಿಪ್ರಕಾಶ್ ಅಡ್ಕಾರ್, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್, ಆರ್.ಬಿ.ಬಶೀರ್, ಶರೀಫ್ ಕಂಠಿ, ನಝೀರ್ ಶಾಂತಿನಗರ, ಬೆಳ್ಯಪ್ಪ ಗೌಡ ಬಳ್ಳಡ್ಕ , ಮೂಸಕುಂಞಿ ಪೈಂಬೆಚ್ಚಾಲು, ಅಶ್ರಫ್ ಗುಂಡಿ, ಮನೋಜ್ ಕುರುಂಜಿಭಾಗ್ ಹಾಗೂ ಕಬಡ್ಡಿ ಮತ್ತು ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.
ವಾಲಿಬಾಲ್ ತಾಲೂಕು ಅಸೋಸಿಯೇಷನ್ ಅಧ್ಯಕ್ಷ
ದೊಡ್ಡಣ್ಣ ಬರೆಮೇಲು ಕಾರ್ಯಕ್ರಮ ನಿರ್ವಹಿಸಿದರು.