ಯುವಕರ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ
ಮರ್ಕಂಜ ಗ್ರಾಮದ ಕೊಚ್ಚಿ ಸರೋಜಿನಿ ಪುರುಷೋತ್ತಮ ಎಂಬವರ ಮನೆ ತುಂಬಾ ಶೀತಿಲಾವಸ್ಥೆಯಲ್ಲಿ ಇರುವುದನ್ನು ಕಂಡು ಬಲ್ಕಾಡಿ ಕುಟುಂಬದವರು ಮನೆ ದುರಸ್ಥಿ ಗೊಳಿಸಿ ದ ಘಟನೆ ನಡೆದಿದೆ.

ಕೊಚ್ಚಿ ಸರೋಜಿನಿ ಪುರುಷೋತ್ತಮರವರ ಮನೆ ಶಿಥಿಲಾವಸ್ಥೆಗೆ ತಲುಪಿತ್ತು. ಸರೋಜಿನಿಯವರ ಪತಿ ಪುರುಷೋತ್ತಮರವರು ಅಸೌಖ್ಯಕ್ಕೆ ಒಳಗಾಗಿದ್ದ ಕಾರಣ ಮತ್ತು ಪುಟ್ಟ ಇಬ್ಬರು ಮಕ್ಕಳು ಇರುವ ಕಾರಣ ಮನೆ ದುರಸ್ತಿ ಮಾಡಲು ಸಾಧ್ಯವಾಗಿರಲಿಲ್ಲ. ಮನೆಯ ಸುತ್ತಲೂ ಟಾರ್ಪಲ್ ಅಳವಡಿಸಿದ್ದ ಕಾರಣ ಮರ್ಕಂಜದ ಮಿತ್ರ ಬಳಗದವರು ಹಿಂದೆ ಟಾರ್ಪಲ್ ತೆಗೆದು ಗೋಡೆ ಕಟ್ಟಿದ್ದರು. ಆದರೆ ಇದೀಗ ಮನೆಯ ಮಾಡು ಶಿಥಿಲಾವಸ್ಥೆಗೆ ತಲುಪಿದ್ದ ಕಾರಣ ದುರಸ್ತಿ ಮಾಡಲು ಮನೆಯವರು ಸಂಘ ಸಂಸ್ಥೆಯ ಮೊರೆ ಹೋಗಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಬಲ್ಕಾಡಿ ಕುಟುಂಬದ ಸದಸ್ಯರು ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ಗೋವಿಂದ ಅಳವುಪಾರೆಯವರೊಂದಿಗೆ ದುರಸ್ಥಿ ಮಾಡಲು ಮುಂದಾದರು.
ಬಲ್ಕಾಡಿಯ ರೇಣುಕಾಪ್ರಸಾದ್ ರವರ ನೇತೃತ್ವದಲ್ಲಿ ತನ್ನ ಕುಟುಂಬದ ಯುವಕರನ್ನು ಸೇರಿಸಿ ಮನೆ ದುರಸ್ತಿ ಕಾರ್ಯ ಕೈ ಗೊಂದರು.
ದುರಸ್ತಿಗೆ ಬೇಕಾದ ಸಿಮೆಂಟ್ ಕಂಬ ,ಕಬ್ಬಿಣ ಪೈಪುಗಳನ್ನು ತರಿಸಿ ಸಿಮೆಂಟ್ ಶೀಟು ಅಳವಡಿಸಿ ಮನೆಯ ಸುತ್ತ ಸ್ವಚ್ಚಗೊಳಿಸಿದ್ದಾರೆ. ಆ ಮೂಲ ಬಲ್ಕಾಡಿ ಕುಟುಂಬದ ಸದಸ್ಯರು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.